ಪುಷ್ಪ ಸಿನಿಮಾದ ಸೀಕ್ವೆಲ್ ʻಪುಷ್ಪ ದಿ ರೂಲ್ʼಗಾಗಿ ಚಿತ್ರಜಗತ್ತು ಕುತೂಹಲದಿಂದ ಕಾಯ್ತಿರೋ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಆದರೆ, ಪುಷ್ಪರಾಜ್ ಜೊತೆಗೆ ಈ ಭಾರಿ ಜಿರೋ ಸೈಜ್ ಸೊಂಟ ಬಳುಕಿಸೋ ಬ್ಯೂಟಿ ಯಾರು ಅನ್ನೋದು ಪ್ರಶ್ನೆಯಾಗೇ ಉಳಿದಿದೆ. ಪುಷ್ಪ ಪಾರ್ಟ್ 1 ನಲ್ಲಿ ಸೌತ್ ಸುಂದರಿ ಸಮಂತಾ ಊ ಅಂಟಾವ ಮಾವ ಅಂತ ತಮ್ಮ ಸೆಕ್ಸಿ ಸೊಂಟ ಕುಣಿಸಿ ಕಲಾಭಿಮಾನಿಗಳನ್ನ ಕುಂತಲ್ಲೇ ಕುಣಿಸಿದ್ದರು. ಬಿಗ್ ಸ್ಕ್ರೀನ್ಗೆ ಕಿಚ್ಚು ಹಚ್ಚಿ ಪುಷ್ಪರಾಜ್ ಮೈಲೇಜ್ ಹೆಚ್ಚಿಸಿದ್ದರು. ಪ್ಯಾನ್ ಇಂಡಿಯಾ ತುಂಬೆಲ್ಲಾ ಪುಷ್ಪರಾಜ್ ಜೊತೆ ತಮ್ಮ ಖ್ಯಾತಿಯನ್ನೂ ಹೆಚ್ಚಿಸಿಕೊಂಡಿದ್ದರು. ಹೀಗಾಗಿ, ಪಾರ್ಟ್ 2 ಗೂ ಮಜಿಲಿನಾ ಅಪ್ರೋಚ್ ಮಾಡಲಾಗಿತ್ತು.
ಐಟಂ ಹಾಡಿಗೆ ಪುಷ್ಪರಾಜ್ ಜೊತೆ ಲೆಗ್ ಶೇಕ್ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ, ಐಟಂ ಹಾಡಿಗೆ ಹಾಟ್ ಅಂಡ್ ಬೋಲ್ಡ್ ಆಗಲಿಚ್ಚಿಸದ ಸ್ಯಾಮ್ ಪುಷ್ಪ-2 ಆಫರ್ನ ರಿಜೆಕ್ಟ್ ಮಾಡಿದ್ದಾರೆನ್ನುವ ಸುದ್ದಿ ಹಬ್ಬಿತ್ತು. ಅನಂತರ ಕಿಸ್ ಚೆಲುವೆ ಶ್ರೀಲೀಲಾ, ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್, ಕೋಸ್ಟಲ್ ಬ್ಯೂಟಿ ಪೂಜಾ ಹೆಗ್ಡೆ, ಸೌತ್ ಸುಂದರಿ ಕಾಜಲ್ ಅಗರ್ವಾಲ್, ಬಾಲಿವುಡ್ ಬೆಡಗಿ ದಿಶಾ ಪಟಾಣಿ ಹೀಗೆ ಅನೇಕ ನಟಿಮಣಿಯರ ಹೆಸರು ಕೇಳಿಬಂದಿತ್ತು. ಆದರೆ, ಇಲ್ಲಿ ತನಕ ಪುಷ್ಪರಾಜ್ ಐಟಂ ಗರ್ಲ್ ಯಾರು ಅನ್ನೋದು ಇನ್ನೂ ನಿಕ್ಕಿಯಾಗಿಲ್ಲ
ಮೂಲಗಳ ಪ್ರಕಾರ ಬಾಲಿವುಡ್ ಹಾಟ್ ಚೆಲುವೆ ದಿಶಾ ಪಟಾಣಿ ಜಾಸ್ತಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ಕಲ್ಕಿ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ಗೆ ಜೋಡಿಯಾಗಿ ಕಿಕ್ಕೇರಿಸೋ ದಿಶಾನ, ಪುಷ್ಪರಾಜ್ ಜೊತೆ ಕುಣಿಸ್ಬೇಕು ಅಂತ ನಿರ್ದೇಶಕ ಸುಕುಮಾರ್ಗಾರು ಪ್ಲಾನ್ ಮಾಡಿದ್ರಂತೆ. ಆದರೆ, ದಿಶಾ ಮೇಡಂ ದುಬಾರಿ ಸಂಭಾವನೆ ಕೇಳಿದ್ರಿಂದ ಕೈಬಿಡಲಾಗಿದೆಯಂತೆ. ದೇವರ ಚಿತ್ರದ ಮೂಲಕ ಸೌತ್ಗೆ ಲಗ್ಗೆ ಇಟ್ಟಿರೋ ಅತಿಲೋಕ ಸುಂದರಿಯ ಪುತ್ರಿ ಜಾಹ್ನವಿ ಕಪೂರ್ ಅವ್ರನ್ನೇ ಫೈನಲ್ ಮಾಡೋದಕ್ಕೆ ಪುಷ್ಪ 2 ಫಿಲ್ಮ್ ಟೀಮ್ ನಿರ್ಧರಿಸಿದೆಯಂತೆ. ಸದ್ಯ ಹೀಗೊಂದು ಸುದ್ದಿ ಟಿಟೌನ್ ಅಂಗಳದಲ್ಲಿ ಹರಿದಾಡ್ತಿದೆ. ಧಡಕ್ ಚೆಲುವೆ ಜಾಹ್ನವಿಗೆ ಸ್ಟೈಲಿಷ್ ಸ್ಟಾರ್ ಅಲ್ಲು ಜೊತೆ ಸೊಂಟ ಬಳುಕಿಸೋ ಅವಕಾಶ ಸಿಗೋ ಚಾನ್ಸಸ್ ಇದೆ ಅಂತ ಹೇಳಲಾಗ್ತಿದೆ.
ಸದ್ಯ, ಜಾಹ್ನವಿ ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ, ರಾಮ್ ಚರಣ್ ತೇಜಾ ನಟನೆಯ ಆರ್ಸಿ-16 ಸಿನಿಮಾಗೆ ನಾಯಕಿಯಾಗಿರೋದ್ರಿಂದ, ಅದೇ ಮೈತ್ರೀ ಮೂವೀ ಮೇಕರ್ಸ್ ನಿರ್ಮಾಣದ ಪುಷ್ಪ-2 ಚಿತ್ರದ ಐಟಂ ಹಾಡಿಗೂ ಸೆಲೆಕ್ಟ್ ಆಗ್ಬೋದು ಎನ್ನುವ ಸುದ್ದಿಯಿದೆ. ಆದರೂ ಪುಷ್ಪ ಐಟಂ ಗರ್ಲ್ ಬಗೆಗಿನ ಸುದ್ದಿ ನೆವರ್ ಎಡ್ಡಿಂಗ್ ಡಿಸ್ಕಷನ್ ಎನ್ನುವಂತಾಗಿದೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಸ್ಪೆಷಲ್ ಸಾಂಗ್ ಚಿತ್ರೀಕರಣದ ಜೊತೆಗೆ ಒಂದಿಷ್ಟು ಟಾಕಿ ಪೋಶನ್ ಶೂಟಿಂಗ್ ಬ್ಯಾಲೆನ್ಸ್ ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್, ಪ್ರಕಾಶ್ ರಾಜ್, ಜಗಪತಿ ಬಾಬು, ಸುನಿಲ್ ಸೇರಿದಂತೆ ಬಿಗ್ ಸ್ಟಾರ್ಸ್ ಸಮಾಗಮ ಇಲ್ಲಾಗಿದೆ. ಈಗಾಗಲೇ ರಿಲೀಸ್ ಡೇಟ್ ಫಿಕ್ಸಾಗಿದ್ದು, ಇದೇ ಆಗಸ್ಟ್ 15ರಂದು ಪುಷ್ಪ ದಿ ರೂಲ್ ಚಿತ್ರ ವರ್ಲ್ಡ್ವೈಡ್ ತೆರೆಗಪ್ಪಳಿಸಲಿದೆ.