ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ. ಅದ್ಭುತ ಸಿನಿಮಾಗಳ ಮೂಲಕ ಹಾಲಿವುಡ್ ಮಂದಿ ಕೂಡ ಸೌತ್ ಸಿನಿ ದುನಿಯಾದತ್ತ ತಿರುಗಿ ನೋಡುವಂತೆ ಮಾಡಿದ ದೃಶ್ಯ ಮಾಂತ್ರಿಕ. ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿ 100% ಸಕ್ಸಸ್ ರೇಟ್ ಹೊಂದಿರುವ ಸಿನಿಕರ್ಮಿ.
ರಾಯಚೂರು ಮೂಲದ ರಾಜಮೌಳಿ ಚಿತ್ರ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರಾಗಿ ಬೆಳೆದು ನಿಂತರು. ತಂದೆ ವಿಜಯೇಂದ್ರ ಪ್ರಸಾದ್ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದು ತಂದೆಯನ್ನು ಮೀರಿಸಿದ ಮಗ ಎನಿಸಿಕೊಂಡವರು. ‘ಮಗಧೀರ’, ‘ಈಗ’, ‘ಬಾಹುಬಲಿ’, ‘RRR’ ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕಟ್ಟಿಕೊಟ್ಟು ರಾಜಮೌಳಿ ಮೋಡಿ ಮಾಡಿದ್ದಾರೆ. ಮೌಳಿ ಜೀವನ ಚರಿತ್ರೆ ಡಾಕ್ಯುಮೆಂಟರಿ ಆಗಿ ಓಟಿಟಿಗೆ ಬರ್ತಿದೆ.
ಮಾಡ್ರನ್ ಮಾಸ್ಟರ್ಸ್’ ಹೆಸರಿನಲ್ಲಿ ನಿರ್ದೇಶಕ ರಾಜಮೌಳಿ ಸಾಹಸಗಾಥೆಯನ್ನು ಜನರ ಮುಂದಿಡುವ ಪ್ರಯತ್ನ ನಡೀತಿದೆ. ನೆಟ್ಫ್ಲಿಕ್ಸ್ನಲ್ಲಿ ಡಾಕ್ಯುಮೆಂಟರಿ ನಿರ್ಮಾಣವಾಗಿದೆ. ಇದರಲ್ಲಿ ಜಕ್ಕಣ್ಣ ಜೊತೆ ಕೆಲಸ ಮಾಡಿದ ಪ್ರಭಾಸ್, ಜ್ಯೂ. ಎನ್ಟಿಆರ್, ರಾಮ್ಚರಣ್ ತಾವು ಕಂಡ ರಾಜಮೌಳಿಯನ್ನು ವಿವರಿಸಿದ್ದಾರೆ. ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಕೀರವಾಣಿ ಹಾಗೂ ರಾಜಮೌಳಿ ಪತ್ನಿ ರಮಾ ಸಹ ಮಾತನಾಡದ್ದಾರೆ.
ರಾಜಮೌಳಿ ‘ಮಾಡ್ರನ್ ಮಾಸ್ಟರ್ಸ್’ ಡಾಕ್ಯೂಮೆಂಟರಿ ಟ್ರೈಲರ್ ರಿಲೀಸ್ ಆಗಿದೆ. ಅದರಲ್ಲಿ ಪ್ರಭಾಸ್, ತಾರಕ್ ಮಾತುಗಳು ವೈರಲ್ ಆಗುತ್ತಿದೆ. ಇವರಿಬ್ಬರು ರಾಜಮೌಳಿಯನ್ನು ಹುಚ್ಚ ಎಂದು ಕರೆದಿದ್ದಾರೆ. ಆದರೆ ಅವರನ್ನು ಅವಮಾನಿಸುವ ಉದ್ದೇಶದಿಂದ ಅಲ್ಲ, ಬದಲಿಗೆ ರಾಜಮೌಳಿ ಜೊತೆ ಕೆಲಸ ಮಾಡುವುದು ಹೇಗಿರುತ್ತದೆ ಎನ್ನುವುದನ್ನು ಈ ರೀತಿ ಹೇಳಿದ್ದಾರೆ.
ರಾಜಮೌಳಿಯಂತಹ ವ್ಯಕ್ತಿಯನ್ನು ನಾನು ಇಲ್ಲಿಯವರೆಗೂ ನೋಡಿಲ್ಲ.. ಆತ ಒಬ್ಬ ಹುಚ್ಚ ಎಂದು ಪ್ರಭಾಸ್ ಹೇಳುವುದನ್ನು ಟ್ರೈಲರ್ನಲ್ಲಿ ಕಾಣಬಹುದು. ರಾಜಮೌಳಿ ಜೊತೆ ಕೆಲಸ ಮಾಡುವುದು ದೊಡ್ಡ ತಲೆ ನೋವು ಎಂದು ಜ್ಯೂ. ಎನ್ ಟಿಆರ್ ಹಿಂದೆ ಹೇಳಿದ್ದರು. ಅದ್ಯ ಟ್ರೈಲರ್ನಲ್ಲಿ “ಆತನ ಜೊತೆ ಕೆಲಸ ಮಾಡುವಾಗ ಕನಿಷ್ಠ ಸಹಾನುಭೂತಿಯೂ ಇಲ್ಲ ಎಂಬ ಭಾವನೆ ನಮಗೆ ಬರುತ್ತದೆ. ಅವನು ಹುಚ್ಚ. ಅವನೊಂದಿಗೆ ಜಗಳವಾಡುವುದರಲ್ಲಿ ಅರ್ಥವಿಲ್ಲ. ಅವನಿಗೆ ಏನು ಬೇಕೋ ಅದನ್ನು ಕೊಟ್ಟು ಹೊರಟು ಬರುವುದು ಉತ್ತಮ” ಎಂದು ಹೇಳಿ ತಾರಕ್ ನಕ್ಕಿದ್ದಾರೆ.
ರಾಜಮೌಳಿ ಕೆಲಸದ ರಾಕ್ಷಸ” ಎಂದು ಪತ್ನಿ ರಮಾ ಹೇಳಿದ್ದಾರೆ. ಮತ್ತೊಂದೆಡೆ, ‘ಮಗಧೀರ’ ಮತ್ತು ‘ಆರ್ಆರ್ಆರ್’ ಚಿತ್ರಗಳಲ್ಲಿ ಜಕ್ಕಣ್ಣ ಜೊತೆ ಕೆಲಸ ಮಾಡಿದ್ದ ರಾಮ್ ಚರಣ್ ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. “ನಾನು ಅವರ ಚಿತ್ರಗಳಲ್ಲಿ ಕೆಲಸ ಮಾಡುವಾಗಲೂ ನಾನು ಮೂರನೇ ವ್ಯಕ್ತಿಯಂತೆ ಭಾವಿಸುತ್ತೇನೆ. ಕೆಲಸದ ಸಮಯದಲ್ಲಿ ಮೈಕ್ಗಳು ಒಡೆಯುತ್ತಿದ್ದವು” ಎಂದಿದ್ದಾರೆ.
ಮಾಡರ್ನ್ ಮಾಸ್ಟರ್ಸ್’ ಹೆಸರಿನಲ್ಲಿ ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿ ಮಾಡುತ್ತಾ ಬರ್ತಿದೆ. ಈ ಬಾರಿ ರಾಜಮೌಳಿ ಕಥೆಯನ್ನು ಅದರಲ್ಲಿ ಹೇಳಲಾಗುತ್ತಿದೆ. ಈ ಡಾಕ್ಯುಮೆಂಟರಿ ಆಗಸ್ಟ್ 2 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ‘ಆರ್ಆರ್ಆರ್’ ಸಿನಿಮಾ ಬಂದೋಗಿ 2 ವರ್ಷ ಆಯಿತು. ಜಕ್ಕಣ್ಣ ಹೊಸ ಸಿನಿಮಾ ಮಾತ್ರ ಅಧಿಕೃತವಾಗಿ ಘೋಷಣೆ ಆಗಲಿಲ್ಲ.
ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ತೆರೆಮರೆಯಲ್ಲಿ ರಾಜಮೌಳಿ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ದೇಶ ವಿದೇಶದ ಕಲಾವಿದರು, ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಮಂದಿ ‘ಆರ್ಆರ್ಆರ್’ ಸಿನಿಮಾ ನೋಡಿ ಮೆಚ್ಚಿದ್ದರು. ಹಾಗಾಗಿ ಈ ಬಾರಿ ಹಾಲಿವುಡ್ ರೇಂಜ್ನಲ್ಲೇ ಜಕ್ಕಣ್ಣ ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ.