ಇತ್ತೀಚೆಗೆ ಸೂಪರ್ ಸ್ಟಾರ್ ರಜನೀಕಾಂತ್ ಹೈಸ್ಕೂಲ್ ಹಾಗೂ ಪಿಯುಸಿ ಓದಿದಂತಹ APS ವಿದ್ಯಾಸಂಸ್ಥೆಯ ಅಲುಮ್ನಿ ಮೀಟ್ ನಡೆದಿದೆ. ಅದಕ್ಕಾಗಿ ಹಳೇ ವಿದ್ಯಾರ್ಥಿಯಾದ ತಲೈವಾ ರಜನೀಕಾಂತ್ ರನ್ನ ಕರೆಸಬೇಕು ಅನ್ನೋದು ಒಂದಷ್ಟು ಅಲುಮ್ನಿಗಳ ಆಶಯವಾಗಿತ್ತು. ಗ್ಯಾರಂಟಿ ನ್ಯೂಸ್ ಬಳಿ ರಜನೀಕಾಂತ್ ಆಪ್ತರ ಫೋನ್ ನಂಬರ್ ಪಡೆದು, ಅವರನ್ನ ಅಪ್ರೋಚ್ ಮಾಡಿರೋ ಹಳೇ ವಿದ್ಯಾರ್ಥಿಗಳು, ಕೊನೆಗೂ ಅವರಿಂದ ಒಂದೊಳ್ಳೆ ವಿಡಿಯೋ ಸಂದೇಶ ಪಡೆದಿದ್ದಾರೆ.
ಬ್ಯಾಂಕಾಕ್ ನಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದ ರಜನೀಕಾಂತ್, ಅಲುಮ್ನಿ ಮೀಟ್ ಗೆ ಬಾರಲಾಗಿಲ್ಲ. ಬದಲಿಗೆ ಐದು ನಿಮಿಷಗಳ ಒಂದೊಳ್ಳೆ ವಿಡಿಯೋ ಮಾಡಿ ಕಳಿಸಿದ್ದಾರೆ. ಅದರಲ್ಲಿ ಅವರ ಬೆಂಗಳೂರಿನ ಗವಿಪುರದಲ್ಲಿರೋ ಎಪಿಎಸ್ ಹೈ ಸ್ಕೂಲ್, ಕಾಲೇಜ್ ದಿನಗಳ ನೆನಪುಗಳನ್ನ ಹೊರಹಾಕಿದ್ದಾರೆ. ಕನ್ನಡದಲ್ಲೇ ಮುಕ್ತವಾಗಿ ಮಾತನಾಡಿರೋ ಅವರು, ಬಹಳ ಸೊಗಸಾಗಿ, ಆ ದಿನಗಳನ್ನ ನೆನೆದು ಪುಳಕಿತರಾಗಿದ್ದಾರೆ. ಅವರ ಟೀಚರ್ಸ್, ನಾಟಕ, ಡ್ರಾಮಾ ಕಾಂಪಿಟಿಷನ್, ಸ್ಫೋರ್ಟ್ಸ್ ಗ್ರೌಂಡ್, ಆಡ್ತಿದ್ದ ಆಟಗಳು ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗು ನೀ ಕನ್ನಡವಾಗಿರು ಅನ್ನೋ ಕುವೆಂಪು ಅವರ ಮಾತುಗಳಿಗೆ ನಿಜಕ್ಕೂ ಅರ್ಥ ಬಂದಂತಾಗಿದೆ.
ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಾಕ್ಸಾಫೀಸ್ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಆ ಬಳಿಕ ಜೈಲರ್-2 ಬರುತ್ತೆ ಅನ್ನೋ ಸುದ್ದಿ ಸದ್ದು ಮಾಡಿತ್ತು. ಇದೀಗ ಜೈಲರ್-2 ಮೂವಿಯ ಆಫೀಷಿಯಲ್ ಅನೌನ್ಸ್ಮೆಂಟ್ ಆಗಿದೆ. ಅಷ್ಟೇ ಅಲ್ಲ ಟೈಗರ್ ಕಾ ಹುಕುಂ ಕೂಡ ಶುರುವಾಗಿದ್ದು, ತಲೈವಾ ಅಬ್ಬರ ಕಂಡು ಫ್ಯಾನ್ಸ್ ಹೊಗಳುತ್ತಿದ್ದಾರೆ.
ಯೆಸ್ ಜೈಲರ್ – 2 ಸಿನಿಮಾ ಆಫೀಷಿಯಲ್ ಅಗಿ ಅನೌನ್ಸ್ ಮೆಂಟ್ ಆಗಿದೆ. ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೆಶಕ ಅನಿರುಧ್ ರವಿಚಂದರ್ ಈ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಲೈವಾ ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಅವತಾರದಲ್ಲಿ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್,
ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್