ಚಿತ್ರ ವಿಚಿತ್ರ ಕಾರಣಗಳಿಗೆ ಸದಾ ಸುದ್ದಿಯಲ್ಲಿರುವ, ನಾನಾ ವೇಷಗಳನ್ನು ತೊಟ್ಟು, ನಾನಾ ರೀತಿಯ ತಂತ್ರಗಳನ್ನು ಮಾಡುವ ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ರಾಖಿ ಸಾವಂತ್ ಪಾಪರಾಟ್ಜಿಯೊಬ್ಬರಿಗೆ ಸಂದೇಶ ಕಳಿಸಿ ತಿಳಿಸಿದ್ದಾರಂತೆ. ಆ ವಿಷಯನ್ನು ಪಾಪರಾಟ್ಜಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಿಜಕ್ಕೂ ರಾಖಿ ಸಾವಂತ್ ಆರೋಗ್ಯ ಹದಗೆಟ್ಟಿದೆಯೇ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ.
ರಾಖಿಯ ಒಂದು ಕೈಗೆ ಆಕ್ಸಿಮೀಟರ್ ಮತ್ತೊಂದು ಕೈಗೆ ಬಿಪಿ ಯಂತ್ರವನ್ನು ಹಾಕಿ, ರಾಖಿ ಬೆಡ್ ಮೇಲೆ ಮಲಗಿರುವ ಚಿತ್ರವನ್ನು ನೋಡಿದ ನೆಟ್ಟಿಗರು ಇದು ನೀಜಾನಾ ಅಥವಾ ರಾಖಿ ಸಾವಂತ್ ಸುದ್ದಿಯಲ್ಲಿ ಇರೋದಕ್ಕಾಗಿ ಏನಾದ್ರು ಹೊಸ ಗಿಮಿಕ್ ಮಾಡ್ತಿದ್ದಾರಾ ಅಂತಾ ಪ್ರಶ್ನೆ ಮಾಡತಿದ್ದಾರೆ..
ಈ ಹಿಂದೆಯೂ ಕೂಡ ರಾಖಿ ಪಬ್ಲಿಸಿಟಿಗಾಗಿ ಮದುವೆ ಅವಾಂತರ ಮಾಡುಕೊಂಡಿದ್ದು, ಆ ನಂತರ ಗಂಡನ ಮನೆ ಮುಂದೆ ಪ್ರತಿಭಟನೆ, ಹೀಗೆ ಸುದ್ದಿಯಲ್ಲಿ ಇರೋಕೆ ಅಂತಾನೇ ನಾನಾ ಅವಾಂತರ ಮಾಡಿಕೊಳ್ಳುವ ರಾಖಿ ಸಾವಂತ್ ಈಗ ಆಸ್ಪತ್ರೆಗೆ ದಾಖಲಾಗಿರೋ ಫೋಟೋ ವೈರಲ್ ನಿಜವಾ ಅಥವಾ ಪ್ರಚಾರಕ್ಕಾಗಿ ಈ ತರಹ ಮಾಡಿದ್ರಾ ಅಂತ ಕಾದು ನೋಡಬೇಕಿದೆ.