ಸದಾ ಒಂದಲ್ಲಾಒಂದು ಕಾಂಟ್ರವರ್ಸಿಗಳಿಂದಲೇ ಬಾಲಿವುಡ್ನಲ್ಲಿ ಫೇಮಸ್ ಆಗಿರೋ ರಾಖಿ ಸಾವಂತ್. ತಮ್ಮ ವಿಚಿತ್ರ ಹೇಳಿಕೆಗಳಿಂದಲೇ ಅಭಿಮಾನಿಗಳ ನಗೆಪಾಟಲಿಗೀಡಾಗುತ್ತಿರುತ್ತಾರೆ. ಆದರೆ ಇದೀಗ ರಾಖಿ ತಮ್ಮ ಸಹ ನಟಿಯರ ಭಯಾನಕ, ಕರಾಳ ರೂಪವನ್ನು ತೆರೆದಿಟ್ಟಿದ್ದಾರೆ.
ಸಿನಿಮಾ ಎಂದರೆ ಬಣ್ಣ ಬಣ್ಣದ ಜಗತ್ತು. ಇಲ್ಲಿ ರಿಯಾಲಿಟಿ ಬಿಟ್ಟು ಮುಖವಾಡ ಹೊತ್ತು ತಿರುಗಿದರೆ ಮಾತ್ರ ಇಲ್ಲಿ ಅವಕಾಶ. ಈ ಹಿನ್ನೆಲೆ ಸಂದರ್ಶನವೊಂದರಲ್ಲಿ ರಾಖಿ ಸಾವಂತ್ ಬಾಲಿವುಡ್ ಇಂಡಸ್ಟ್ರೀಯ ನಟಿಯರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇಂಡಸ್ಟ್ರಿಯಲ್ಲಿ ರೇಪ್ ನಡೆಯುವುದಿಲ್ಲ. ಬದಲಿಗೆ ರೇಪ್ ಮಾಡಿಸಿಕೊಳ್ಳಲು ನಟಿಯರು ತುದಿಗಾಲಲ್ಲಿ ನಿಂತಿರುತ್ತಾರೆ. ಅಷ್ಟೇ ಅಲ್ಲದೇ ನಿರ್ದೇಶಕರು ಮತ್ತು ನಿರ್ಮಾಪಕರೊಟ್ಟಿಗೆ ಮಂಚ ಹಂಚಿಕೊಂಡು, ಎಲ್ಲವನ್ನೂ ರಿಕಾರ್ಡ್ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಾರೆ. ಅವರೊಟ್ಟಿಗೆ ತೀರಾ ಅಸಭ್ಯ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ನಟನೆಯ ಗಂಧಗಾಳಿಯು ಗೊತ್ತಿಲ್ಲದವರು ಇಂಡಸ್ಟ್ರಿಯಲ್ಲಿದ್ದಾರೆ. ಇವರಿಗೆ ಕೇವಲ ವಿಡಿಯೋ ಹಿಡಿದುಕೊಂಡು ಬ್ಲ್ಯಾಕ್ಮೇಲ್ ಮಾಡಿ, ಇದನ್ನು ನಿಮ್ಮ ಮನೆಯವರಿಗೆ ತೋರಿಸಲಾ ಅಥವಾ ಹೀರೋಯಿನ್ಗಳನ್ನಾಗಿ ಮಾಡುತ್ತೀರಾ ಎಂದು ಬ್ಲ್ಯಾಕ್ಮೇಲ್ ಮಾಡುತ್ತಾರೆ ಎಂದು ತುಚ್ಛವಾಗಿ ಹಿಯಾಳಿಸಿದ್ದಾರೆ.