ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ಶೆಟ್ರಿಗೆ ಸ್ನೇಹಿತರು, ಆಪ್ತರು ಹಾಗೂ ಅಭಿಮಾನಿ ವಲಯದಿಂದ ಶುಭಾಷಯದ ಮಹಾಪೂರವೇ ಹರಿದುಬರ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಕರ್ಣನ ಬರ್ತ್ಡೇಗೆ ಹೊಂಬಾಳೆ ಸರ್ಪ್ರೈಸ್ ಕೊಟ್ಟಿದೆ. ಶೆಟ್ರಿಗೆ ಸ್ಪೆಷಲ್ಲಾಗಿ ವಿಶ್ ಮಾಡಿ ಫೋಟೋ ಹಂಚಿಕೊಂಡಿರುವ ಹೊಂಬಾಳೆ ಸಂಸ್ಥೆ, ರಕ್ಷಿತ್ಗೆ ಸಿನಿಮಾ ಮೇಲಿರುವ ಪ್ರೀತಿ ಹಾಗೂ ಪ್ಯಾಷನ್ನ ಕೊಂಡಾಡಿದೆ. ಅಟ್ ದಿ ಸೇಮ್ ಟೈಮ್ ರಿಚರ್ಡ್ ಆಂಟನಿ ಸಿನಿಮಾ ಶುರು ಮಾಡುವುದಕ್ಕೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿರುವುದಾಗಿ ತಿಳಿಸಿದೆ.
ಅಂದ್ಹಾಗೇ, ಹೊಂಬಾಳೆ ಸಂಸ್ಥೆ ರಿಚರ್ಡ್ ಆಂಟನಿ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ, ಹೊಂಬಾಳೆ ಸಂಸ್ಥೆಯೇ ಶೆಟ್ರಿಗೆ ವಿಶ್ ಮಾಡಿ ರಿಚರ್ಡ್ ಆಂಟನಿ ಸಿನಿಮಾ ಶುರು ಮಾಡುವುದಕ್ಕೆ ಕಾತುರರಾಗಿರುವುದಾಗಿ ತಿಳಿಸಿದೆ. ಅಲ್ಲಿಗೆ, ಬಜಾರ್ನಲ್ಲಿ ಕೇಳಿಬಂದ ಸುದ್ದಿ ಬರೀ ಗಾಸಿಪ್ ಅನ್ನೋದು ಸ್ಪಷ್ಟವಾಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಚಿತ್ರವನ್ನ ಡೈರೆಕ್ಟ್ ಮಾಡಿ , ಆಕ್ಟ್ ಮಾಡ್ತಿರುವುದು ಪಕ್ಕಾ ಆಗಿದೆ. ಇನ್ನೂ ಈ ಚಿತ್ರ ಉಳಿದವರು ಕಂಡಂತೆ ಸಿನಿಮಾದ ಸೀಕ್ವೆಲ್ ಆಗಿದ್ದು ನಿರೀಕ್ಷೆ ಹೆಚ್ಚಿದೆ. ಅಷ್ಟಕ್ಕೂ ಈ ಸಿನಿಮಾ ಎಲ್ಲಿಗೆ ಬಂದಿದೆ? ತಾರಾಬಳಗದಲ್ಲಿ ಯಾರೆಲ್ಲ ಇರ್ತಾರೆ ? ಯಾವಾಗಿಂದ ಶೂಟಿಂಗ್ ಶುರು? ಇದೆಲ್ಲದರ ಬಗ್ಗೆ ಶೆಟ್ರು ಪ್ಲಸ್ ಹೊಂಬಾಳೆ ಸಂಸ್ಥೆಯೇ ಅಧಿಕೃತವಾಗಿ ಹಂಚಿಕೊಳ್ಳಬೇಕಿದೆ.
ಇನ್ನೂ ಬರ್ತ್ ಡೇ ದಿನವೇ ಶೆಟ್ರು ಮಗದೊಂದು ಅಪ್ಕಮ್ಮಿಂಗ್ ಪ್ರಾಜೆಕ್ಟ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ‘ಏಕಂ’ ಎಂಬ ವೆಬ್ ಸಿರೀಸ್ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ಕೆಸರು ನೀರು ತುಂಬಿಕೊಂಡಿರುವ ದಾರಿ ಮಧ್ಯೆ ಸಣ್ಣ ಒಂದು ಭಾಗದಲ್ಲಿ ಜನರು ಮೆಟ್ಟಿಕೊಂಡೇ ಓಡಾಡುತ್ತಿರುವ ದೃಶ್ಯವನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಏಕಂ ಬಗ್ಗೆ ಅಪ್ಡೇಟ್ ತರುತ್ತಿದ್ದೇವೆ. ಈ ಸ್ಥಳವನ್ನು ತುಂಬಾ ಹತ್ತಿರದಿಂದ ನೋಡಿ. ಮಚ್ ಲವ್ ಎಂದು ನಟ ಬರೆದುಕೊಂಡಿದ್ದಾರೆ. ಜೂನ್ 17ರಂದು ಅಧಿಕೃತ ಮಾಹಿತಿ ನೀಡುತ್ತೇವೆ ಎಂದಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಿಂದ ಒಟಿಟಿ ಫ್ಲಾರ್ಟ್ ಫಾರಂಗೆ 8 ಎಪಿಸೋಡ್ಗಳ ‘ಏಕಂ’ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.