- ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಆರ್ ಜಿ ವಿ ಸರಣಿ ಟ್ವೀಟ್
- ಅಭಿಮಾನಿಯನ್ನು ಕೊಲ್ಲಲು ಸ್ಟಾರ್ ನಟ ಡೈ ಹಾರ್ಡ್ ಅಭಿಮಾನಿಗಳನ್ನೇ ಬಳಸಿಕೊಂಡಿದ್ದಾರೆ
- ಸ್ಟಾರ್ ಹೀರೋಗಳ ಆರಾಧನಾ ಸಂಸ್ಕೃತಿಯ ವಿಲಕ್ಷಣತೆಗೆ ಸೂಕ್ತ ಉದಾಹರಣೆ
ಸೌತ್ ಸಿನಿಮಾ ಇಂಡಸ್ಟ್ರಿಯ ಸೆನ್ಸೇಷನಲ್ ಸಿನಿಮಾ ಮೇಕರ್ ರಾಮ್ ಗೋಪಾಲ್ ವರ್ಮಾ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ದರ್ಶನ್ ಅಭಿಮಾನಿ ಅಂತ ಹೇಳಲಾಗ್ತಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಆರ್ ಜಿ ವಿ ಸರಣಿ ಟ್ವೀಟ್ ಮಾಡಿದ್ದಾರೆ. “ಒಬ್ಬ ಸ್ಟಾರ್ ತನ್ನ ವೈಯಕ್ತಿಯ ಜೀವನದಲ್ಲಿ ತಲೆ ಹಾಕಿದ ಡೈ ಹಾರ್ಟ್ ಫ್ಯಾನ್ ಅನ್ನು ಕೊಲ್ಲಲು ಮತ್ತೊಬ್ಬ ಡೈ ಹಾರ್ಟ್ ಫ್ಯಾನ್ ಅನ್ನು ಬಳಸಿಕೊಂಡಿದ್ದು, ಸ್ಟಾರ್ ಆರಾಧನೆ ಸಿಂಡ್ರೋಮ್ ವಿಚಿತ್ರಕ್ಕೆ ಸೂಕ್ತ ಉದಾಹರಣೆ. ಅಭಿಮಾನಿಗಳು ತಮ್ಮ ತಾರೆಯರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂದು ಆದೇಶಿಸಲು ಬಯಸುವುದು ಅದೇ ಸಿಂಡ್ರೋಮ್ನ ಅನಿವಾರ್ಯ ಅಡ್ಡ ಪರಿಣಾಮವಾಗಿದೆ” ಎಂದು ಆರ್ಜಿವಿ ಬರೆದುಕೊಂಡಿದ್ದಾರೆ.
ಇಲ್ಲಿಗೆ ಸುಮ್ಮನಾಗದ ಆರ್ ಜಿ ವಿ “ಒಬ್ಬ ಫಿಲ್ಮ್ ಮೇಕರ್ ಸ್ಕ್ರೀನ್ಪ್ಲೇ ಪಕ್ಕಾ ಆದ ಮೇಲೆ ಚಿತ್ರೀಕರಣ ಆರಂಭಿಸಬೇಕು. ಆದರೆ ಚಿತ್ರೀಕರಣ ನಡೆಯುತ್ತಿರುವಾಗ ಮೇಕರ್ಸ್ ಬಹಳ ಸಲ ಬರೆಯುತ್ತಲೇ ಇದ್ದಾರೆ. ಆದರೆ ದರ್ಶನ್ ಅರೆಸ್ಟ್ ವಿಚಾರದಲ್ಲಿ ಸಿನಿಮಾ ಬಿಡುಗಡೆ ಬಳಿಕ ಸ್ಕ್ರೀನ್ಪ್ಲೇ ಬರೆಯುವ ಕೆಲಸ ಆರಂಭವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಕುತೂಹಲಕ್ಕೆ ಕಾರಣವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಯಾಗಿರುವ ನಟ ದರ್ಶನ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡ್ತಾರಾ? ಹೀಗೊಂದು ಸಂಶಯ ಮೂಡಿದೆ.
ಇನ್ನು ಆರ್ಜಿವಿ ಪೋಸ್ಟ್ಗೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ನೀವು ದರ್ಶನ್ ಕುರಿತು ಸಿನಿಮಾ ಮಾಡಿ. ಅದಕ್ಕೆ ನೀವೇ ಸೂಕ್ತ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ವರ್ಮಾ ಸಾಕಷ್ಟು ನೈಜಘಟನೆಗಳನ್ನು ತೆರೆಗೆ ತಂದಿದ್ದಾರೆ. ಹಾಗಾಗಿ ದರ್ಶನ್ ಬಗ್ಗೆ ಸಿನಿಮಾ ಮಾಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.