ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಸೆಟ್ಟೇರಿದ್ದು, ಮುಂಬೈ ಸ್ಟುಡಿಯೋವೊಂದರಲ್ಲಿ ಗುರುಕುಲದ ಸೆಟ್ ನಿರ್ಮಿಸಿ, ರಾಮಾಯಣ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಈ ಸಿನಿಮಾದ ಹಲವು ಫೋಟೋಗಳು ಲೀಕ್ ಆಗಿತ್ತು. ಮತ್ತೆ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಫೋಟೊಗಳು ವೈರಲ್ ಆಗಿದೆ.
ರಾಮಾಯಣ ಸೆಟ್ನಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಂತೆ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಟ್ನಲ್ಲಿ ಮೊಬೈಲ್ ಫೋನ್ಗಳನ್ನು ಬಳಸದಂತೆ ಚಿತ್ರತಂಡ ಆದೇಶಿಸಿದೆ. ಈ ಸಿನಿಮಾ ಸಾಕಷ್ಟು ಭದ್ರತೆ ನಡುವೆ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಆದರೂ ಚಿತ್ರದ ಫೋಟೊಗಳು ಲೀಕ್ ಆಗಿರುವುದು ಚಿತ್ರತಂಡಕ್ಕೆ ಬೇಸರ ತಂದಿದೆ. ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ.
ರಣಬೀರ್ ಕಪೂರ್ ಅವರು ರಾಮಾಯಣ ಸಿನಿಮಾದ ರಾಮನ ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮುಂಚೆ ಅನಿಮಲ್ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ರಾಮಾಯಣ ಸಿನಿಮಾಗಾಗಿ ಸಖತ್ ಫಿಟ್ ಆಂಡ್ ಫೈನ್ ಆಗಿದ್ದಾರೆ.