ನಿತೇಶ್ ತಿವಾರಿ ಅಭಿನಯದ ರಾಮಾಯಣ ಸಿನಿಮಾ ಭಾರೀ ಸದ್ದುಮಾಡಿದೆ. ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ ಎನ್ನಲಾಗ್ತಿದೆ. ರಾಮ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ರಾಮನ ಪಾತ್ರ ಮಾಡಿದ ರಣಬೀರ್ ಬಗ್ಗೆ ಬಾಲಿವುಡ್ ಹಿರಿಯ ನಟ ಮುಕೇಶ್ ಖನ್ನಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಶಕ್ತಿಮಾನ್ ಖ್ಯಾತಿಯ ಮುಖೇಶ್ ಖಾನ್ ಅವರು ಈ ಬಾರಿ ರಣಬೀರ್ ಕಪೂರ್ ಬಗ್ಗೆ ಶಾಕಿಂಗ್ ಕಮೆಂಟ್ ಮಾಡಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತಾಡಿದ ಮುಕೇಶ್, ನಿರ್ದೇಶಕ ನಿತೀಶ್ ತಿವಾರಿ ಅವರ ಮುಂಬರುವ ಚಿತ್ರ ರಾಮಾಯಣದಲ್ಲಿ ರಣಬೀರ್ ಕಪೂರ್ ಭಗವಾನ್ ಶ್ರೀರಾಮನಾಗಿ ಕಾಣಿಸಿಕೊಳ್ಳುವ ವಿಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
2023 ರಲ್ಲಿ ಬಿಡುಗಡೆಯಾದ ರಣಬೀರ್ ಅವರ ಬ್ಲಾಕ್ ಬಸ್ಟರ್ ಸಿನಿಮಾ ‘ಅನಿಮಲ್’ ಬಗ್ಗೆ ಮಾತಾಡಿದ ಮುಕೇಶ್, ರಣಬೀರ್ ಹಿಂದಿನ ಸಿನಿಮಾಗಳ ಪಾತ್ರಗಳು ಅದರಲ್ಲೂ ‘ಅನಿಮಲ್’ ಸಿನಿಮಾ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಭಗವಾನ್ ರಾಮನ ಪವಿತ್ರ ಪಾತ್ರದ ಸಿನಿಮಾ ಮೇಲೆ ನೆಗೆಟಿವ್ ಇಮೇಜ್ ಪರಿಣಾಮ ಬೀರಬಹುದು ಎಂದಿದ್ದಾರೆ.
ಮಿಡ್-ಡೇ ಜೊತೆಗಿನ ಸಂದರ್ಶನದಲ್ಲಿ ಮುಕೇಶ್ ಅವರಿಗೆ ರಣಬೀರ್ ಕಪೂರ್, ಭಗವಾನ್ ರಾಮನಾಗಿ ನಟಿಸುವ ವಿಚಾರಕ್ಕೆ ನೀವ್ ಏನಂತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮುಕೇಶ್, ನಾವು ಯಾವ ವಿಚಾರದ ಬಗ್ಗೆ ಮಾತಾಡಿದ್ರು. ಈತ ಎಲ್ಲದರ ಬಗ್ಗೆ ಕಮೆಂಟ್ ಮಾಡ್ತಾನೆ ಅಂತಾರೆ. ಆದ್ರೆ ನಾನು ನನ್ನ ಅಭಿಪ್ರಾಯ ಹೇಳ್ತಿದ್ದೇನೆ ಎಂದ್ರು.
ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿನ ಅರುಣ್ ಗೋವಿಲ್ ಅವರೊಂದಿಗೆ ಹೋಲಿಕೆ ರಣಬೀರ್ ಹೊಲಿಕೆ ಅಸಾಧ್ಯ ಎಂದಿದ್ದಾರೆ. ರಾಮನ ಪಾತ್ರದಲ್ಲಿ ನಟಿಸುವವರು ‘ರಾಮ’ ನಂತಿರಬೇಕೇ ಹೊರತು ‘ರಾವಣ’ನಂತಲ್ಲ ಎಂದು ಮುಕೇಶ್ ಖನ್ನಾ ಹೇಳಿದ್ರು.
ನಿಜ ಜೀವನದಲ್ಲಿ ಗಲಾಟೆ, ಗೂಂಡಾಗಿರಿ ಮಾಡಿದ್ರು ಅದು ತೆರೆಯ ಮೇಲೆ ಕಾಣಿಸುತ್ತದೆ. ನೀವು ರಾಮನ ಪಾತ್ರವನ್ನು ಮಾಡುತ್ತಿದ್ದರೆ, ನೀವು ಪಾರ್ಟಿ ಮಾಡಬಾರದು ಅಥವಾ ಕುಡಿಯಬಾರದು. ಆದ್ರೆ ಯಾರು ರಾಮನಾಗಬೇಕೆಂದು ನಿರ್ಧರಿಸಲು ನಾನು ಯಾರು? ಎಂದು ಮುಕೇಶ್ ಹೇಳಿದ್ರು.
ನಟ ಪ್ರಭಾಸ್ ಕೂಡ ರಾಮ ಪಾತ್ರವನ್ನ ಮಾಡಲು ಪ್ರಯತ್ನಿಸಿದ್ದಾರೆ. ಆದ್ರೆ ಜನ ಅವರನ್ನು ಒಪ್ಪಲಿಲ್ಲ. ಇದಕ್ಕೆ ಕಾರಣ ಅವರು ಕೆಟ್ಟ ನಟ ಅನ್ನೋದಲ್ಲ, ಆದ್ರೆ ಅವರು ರಾಮ್ನಂತೆ ಕಾಣುತ್ತಿಲ್ಲ ಅನ್ನೋದೆ ಕಾರಣ.. ಈಗ ರಾಮನ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಕಪೂರ್ ಕುಟುಂಬದ ಹೆಮ್ಮೆ. ಒಳ್ಳೆಯ ನಟ, ಆದ್ರೆ ಅವನು ರಾಮನಂತೆ ಕಾಣಬೇಕು. ಇತ್ತೀಚಿಗಷ್ಟೇ ‘ಅನಿಮಲ್’ ಸಿನಿಮಾ ಮಾಡಿದ್ದು, ಆ ಸಿನಿಮಾದಲ್ಲಿ ಅವರ ನೆಗೆಟಿವ್ ಇಮೇಜ್ ಹೈಲೈಟ್ ಆಗಿತ್ತು ಎಂದು ಮುಕೇಶ್ ಹೇಳಿದ್ದಾರೆ.