ಇಂಡಿಯನ್ ಸಿನಿ ದುನಿಯಾದಲ್ಲಿ ರಾಮಾಯಣ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಾಯಿದೆ.. ಸಿನಿಮಾದ ಪಾತ್ರಗಳ ವಿಚಾರದಿಂದ ಹಿಡಿದು ಸಿನಿಮಾದ ಎಲ್ಲಾ ವಿಭಾಗಗಳಲ್ಲಿಯೂ ಈ ಸಿನಿಮಾ ದೊಡ್ಡ ಕ್ರೇಜ್ ಕ್ರಿಯೇಟ್ ಮಾಡ್ತಾಯಿದೆ. ಜೊತೆಗೆ ಭಾರಿ ಬಜೆಟ್ ಸಿನಿಮಾ ಅನ್ನೋ ಹೆಗ್ಗಳಿಕೆ ಕೂಡ ಇದೆ. ಸದ್ದಿಲ್ಲದೇ ಶೂಟಿಂಗ್ ಆರಂಭವಾಗಿದೆ ಅನ್ನೋ ಮಾತುಗಳು ಆಗಾಗ ಕೇಳಿ ಬರ್ತಾ ಇದ್ವು. ಈಗ ಸಿನಿಮಾ ಶೂಟಿಂಗ್ ಆರಂಭವಾಗಿದೆ ಅನ್ನೊದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಗುಟ್ಟನ್ನ ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ ಆದರೆ ಈಗ ಚಿತ್ರೀಕರಣದ ಫೋಟೋ ಒಂದು ಲೀಕ್ ಆಗಿ ವೈರಲ್ ಆಗಿದೆ.
ಶ್ರೀಮರಾಮನ ವೇಷದಲ್ಲಿರುವ ರಣ್ಬೀರ್ ಕಪೂರ್ ಹಾಗೂ ಸೀತಾ ಮಾತೆಯ ವೇಷದಲ್ಲಿರುವ ಸಾಯಿ ಪಲ್ಲವಿ ಶೂಟಿಂಗ್ ನಲ್ಲಿ ಭಾಗವಹಿಸಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅರಮನೆಯ ಸೆಟ್ನಲ್ಲಿ ರಾಮ ಸೀತೆ ಓಡಾಡುತ್ತಿರುವ ದೃಶ್ಯದ ಫೋಟೋ ವೈರಲ್ ಆಗಿದೆ. ರಣ್ಬೀರ್ ಕಪೂರ್, ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಗುರುತಿಸಬಹುದು ಇನ್ನು ಸಾಯಿ ಪಲ್ಲವಿ ಸಹ ಸೀತೆಯ ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗ್ತಾಯಿದ್ದಾರೆ. ನ್ಯಾಚುರಲ್ ಬ್ಯೂಟಿಯಿಂದ ಸಾಯಿ ಗಮನ ಸೆಳೆಯುತ್ತಿದ್ದಾರೆ. ಸಿನಿಮಾದಲ್ಲಿ ಲಾರಾ ದತ್ತ ಕೈಕೆಯ ಪಾತ್ರದಲ್ಲಿ ಕಾಣಿಸಿಕೊಂಡ್ರೇ, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ
ಈ ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿರಲಿದೆ ಅನ್ನೋ ಮಾತುಗಳು ಕೇಳಿ ಬರ್ತಾಯಿವೆ.. ಸಿನಿಮಾವನ್ನ ಅತ್ಯಾಧುನಿಕ ಟೆಕ್ನಾಲಜಿ ಬಳಸಿ ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರೀಕರಣಕ್ಕೆ ಮುಂಚೆ ಈ ಸಿನಿಮಾದ ನಟ-ನಟಿಯರಿಗೆ ಟ್ರೈನಿಂಗ್ ಸಹ ಕೊಡಿಸಲಾಗಿದೆ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ಖಚಿತವಾಗಿಲ್ಲ. ಕೆಲವು ಮೂಲಗಳ ಪ್ರಕಾರ ಈ ಸಿನಿಮಾಕ್ಕೆ ಯಶ್ ಸಹ ನಿರ್ಮಾಪಕರಾಗಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾವನ್ನು ಬಾಲಿವುಡ್ನ ಫೇಮಸ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ನಮಿತ್ ಮಲ್ಹೋತ್ರಾ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಮೊದಲ ಭಾಗಕ್ಕೆ 850 ಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಈ ಸಿನಿಮಾಕ್ಕೆ ಹಾಲಿವುಡ್ನ ಹಲವು ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಗೆ ಎರಡು ಒಂದು ವರ್ಷ ಬೇಕಾಗುತ್ತೆ. ಸಿನಿಮಾದ ಶೂಟಿಂಗ್ ಗೆ ಒಂದು ವರ್ಷ ಬೇಕೆ ಬೇಕು ಅಂತಿವೆ ಬಿಟೌನ್ ಮೂಲಗಳು. ಈ ಸಿನಿಮಾ 2027ರ ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ.