ಕಿಸ್ಸಿಂಗ್ ಸ್ಟಾರ್ ವಿಜಯ್ ದೇವರಕೊಂಡ, ಕಿರಿಕ್ ಕ್ವೀನ್ ರಶ್ಮಿಕಾ ಮಂದಣ್ಣ ನಡುವಿರೋದು ಸ್ನೇಹಾನಾ? ಪ್ರೀತಿನಾ ಅನ್ನೋದಕ್ಕೆ ಕ್ಲ್ಯಾರಿಟಿನೇ ಸಿಗ್ತಿಲ್ಲ. ಆದ್ರೀಗ ರಶ್ಮಿಕಾ ಹೇಳಿರೋ ಅದೊಂದು ಮಾತು ವಿಜಯ್ ಜೊತೆಗಿನ ಪ್ರೀತಿನಾ ಒಪ್ಪಿಕೊಂಡಂತಿದೆ. ದೇವರಕೊಂಡ ಮನೆಗೆ ಸೊಸೆಯಾಗಿ ಹೋಗೋದು ಗ್ಯಾರಂಟಿ ಅನ್ನೋದಕ್ಕೆ ಸೂಚನೆ ಸಿಗ್ತಿದೆ. ಅಷ್ಟಕ್ಕೂ, ರಶ್ಮಿಕಾ ಏನ್ ಹೇಳಿದರು ಅಂತೀರಾ ಈ ಸ್ಟೋರಿ ನೋಡಿ
ರಶ್ಮಿಕಾ ಹಾಗೂ ವಿಜಯ್ ಸಂಬಂಧ ಬರೀ ಸ್ನೇಹಕ್ಕೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಅವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಬಾಳ ಪಯಣದಲ್ಲಿ ಒಂದಾಗಲಿಕ್ಕೆ ಇಬ್ಬರು ಪ್ಲಾನ್ ಮಾಡಿಯಾಗಿದೆ ಅನ್ನೋ ಸುದ್ದಿ ಸಾಕಷ್ಟು ಬಾರಿ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದ್ದಿದೆ. ಆದರೆ, ಇವರಿಬ್ಬರು ಮಾತ್ರ ಪ್ರೀತಿ-ಮದುವೆ ವಿಚಾರವನ್ನಅಲ್ಲಗಳೆಯುತ್ತಾ ಪಾರ್ಟಿ, ಹಾಲಿಡೇ ಟ್ರಿಪ್ ಅಂತ ದೇಶ-ವಿದೇಶ ಸುತ್ತುತ್ತಾ ಸಖತ್ ಎಂಜಾಯ್ ಮಾಡ್ತಿದ್ದಾರೆ. ಬಟ್ ಒಟ್ಟಿಗೆ ಕಾಣಿಸಿಕೊಳ್ಳದೇ ಕ್ಯಾಮೆರಾ ಕಣ್ಣು ತಪ್ಪಿಸ್ತಿರೋ ಈ ಜೋಡಿ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ವಿಜಯ್ ಮತ್ತು ರಶ್ಮಿಕಾ ತಮ್ಮ ಪ್ರೀತಿನಾ ಅದ್ಯಾವಾಗ ಒಪ್ಪಿಕೊಳ್ತಾರೆ? ಅದ್ಯಾವಾಗ ಗುಡ್ ನ್ಯೂಸ್ ಕೊಡಲಿದ್ದಾರೆ ಅಂತ ಕಾಯ್ತಿದ್ದಾರೆ. ಹೀಗಿರುವಾಗಲೇ ಸಾನ್ವಿ ಕಡೆಯಿಂದ ಹಿಂಟ್ ಸಿಕ್ಕಿದೆ. ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ʻಗಮ್ ಗಮ್ ಗಣೇಶʼ ಸಿನಿಮಾದ ಪ್ರಿರಿಲೀಸ್ ಇವೆಂಟ್ನಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಪರೋಕ್ಷವಾಗಿ ವಿಜಯ್ ಜೊತೆಗಿನ ಪ್ರೀತಿನಾ ಒಪ್ಪಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ‘ನಿಮ್ಮ ಫೇವರಿಟ್ ಸಹನಟನ ಹೆಸರು ಹೇಳಿ’ ಎಂದು ಕೇಳಿದ ಆನಂದ್ ದೇವರಕೊಂಡ ಪ್ರಶ್ನೆಗೆ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ. ರೌಡಿಬಾಯ್ ನನ್ನ ಫೇವರಿಟ್ ಕೋ ಸ್ಟಾರ್ ಎಂದಿರುವ ರಶ್ಮಿಕಾ ಮಂದಣ್ಣ, ‘ನೀವು ನನ್ನ ಕುಟುಂಬದವರು. ಈ ರೀತಿ ಇಕ್ಕಟ್ಟಿಗೆ ಹೇಗೆ ಸಿಲುಕಿಸುತ್ತೀರಿ’ ಅಂತ ಆನಂದ್ ದೇವರಕೊಂಡಾಗೆ ಕೇಳಿದ್ದಾರೆ. ಅದ್ಯಾವಾಗ ಸಾನ್ವಿ ಬಾಯಿಂದ ಆನಂದ್ ದೇವರಕೊಂಡ ನನ್ನ ಕುಟುಂಬದವರು ಅನ್ನೋ ಮಾತು ಹೊರಬಿತ್ತೋ ಆಗಲಿಂದ, ರಶ್ಮಿಕಾ ವಿಜಯ್ ದೇವರಕೊಂಡ ಕೈ ಹಿಡಿಯೋದು, ದೇವರಕೊಂಡ ಮನೆಗೆ ಸಾನ್ವಿ ಸೊಸೆಯಾಗಿ ಹೋಗೋದು ಗ್ಯಾರಂಟಿ ಅಂತ ಎಲ್ಲ ಮಾತನಾಡಿಕೊಳ್ತಿದ್ದಾರೆ. ಈ ಚರ್ಚೆಗೆ ನ್ಯಾಷನಲ್ ಕ್ರಷ್ ರಶ್ಮಿಕಾ ಏನಂತ ರಿಯಾಕ್ಟ್ ಮಾಡ್ತಾರೋ? ಏನೋ ಗೊತ್ತಿಲ್ಲ. ಆದರೆ, ಗೀತಗೋವಿಂದ ಜೋಡಿ ರಿಯಲ್ ಲೈಫ್ನಲ್ಲಿ ಒಂದಾಗ್ಬೇಕು ಅನ್ನೋದು ಅವರಿಬ್ಬರ ಅಭಿಮಾನಿಗಳ ಆಶಯ.
ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೇ ವಿಜಯ್- ರಶ್ಮಿಕಾ ಗೀತಗೋವಿಂದಂ ಚಿತ್ರದಲ್ಲಿ ಜೋಡಿಯಾಗಿದ್ದರು. ಇವರಿಬ್ಬರ ಕೆಮಿಸ್ಟ್ರಿ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ಮಾತ್ರವಲ್ಲ ಗೀತಾ ಹಾಗೂ ಗೋವಿಂದನಿಗೆ ಅಪಾರ ಅಭಿಮಾನಿಗಳು ಹುಟ್ಟಿಕೊಂಡರು. ಅನಂತರ ಈ ಜೋಡಿ ಡಿಯರ್ ಕಾಮ್ರೇಡ್ನಲ್ಲಿ ಒಂದಾಯ್ತು. ಆ ಸಿನಿಮಾನೂ ಅಭಿಮಾನಿಗಳ ದಿಲ್ ಗೆದ್ದಿತ್ತು. ಇದೀಗ ಮತ್ತೊಮ್ಮೆ ಈ ಕಾಂಬೋ ಒಂದಾಗುವ ಕ್ಷಣಕ್ಕಾಗಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ. ರೀಲ್ ಮಾತ್ರವಲ್ಲ ರಿಯಲ್ನಲ್ಲೂ ಗಂಡ-ಹೆಂಡ್ತಿಯನ್ನಾಗಿ ಇವರಿಬ್ಬರನ್ನ ನೋಡೋದಕ್ಕೆ ಭಕ್ತಬಳಗ ಎದುರನೋಡ್ತಿದೆ. ಎನಿವೇ, ಈ ಜೋಡಿ ನಿಜಜೀವನದಲ್ಲಿ ಒಂದಾಗುತ್ತಾ?ಫ್ಯಾನ್ಸ್ ಬಯಕೆ ಈಡೇರುತ್ತಾ ಕಾದುನೋಡಬೇಕಿದೆ.