ಬಹುಭಾಷಾ ನಟಿ, ಕೊಡಗು ಮೂಲದ ರಶ್ಮಿಕಾ ಮಂದಣ್ಣರವರು ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ರಶ್ಮಿಕಾ ಕೊಡವ ಭಾಷೆಯಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಫ್ರೆಂಡ್ ಮದುವೆಗೆ ತೆರಳಿದ್ದ ರಶ್ಮಿಕಾ ಕೊಡವ ಶೈಲಿಯಲ್ಲಿ ಸೀರೆ ಉಟ್ಟು ತಮ್ಮ ಮಾತೃಭಾಷೆ ಕೊಡವದಲ್ಲಿ ಮಾತನಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಅನೇಕರಿಗೆ ಅವರು ಮಾತನಾಡಿದ್ದು ಏನು ಎಂದು ಅರ್ಥವಾಗಿಲ್ಲ. ರಶ್ಮಿಕಾ ಹೇಳಿದ್ದ ಮಾತುಗಳ ಅರ್ಥ ನೋಡೋಣ ಬನ್ನಿ.
ʼಎಲ್ಲರಿಗೂ ನಮಸ್ಕಾರ, ನಾನೀಗ ಕೊಡಗಲಿದ್ದೇನೆ, ನನ್ನ ಫ್ರೆಂಡ್ನ ಮದುವೆಗೆ ಬಂದಿದ್ದೇನೆ. ಹೀಗಾಗಿ ಕೊಡವ ಭಾಷೆಯಲ್ಲಿ ನಾನು ಮಾತನಾಡುತ್ತಿದ್ದೇನೆ. ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿವರೆಗೆ ಬಂದಿದ್ದೇನೆ. ಜೊತೆಗೆ ಕಾವೇರಮ್ಮ ಹಾಗೂ ಇಗ್ಗುತಪ್ಪ ಆಶೀರ್ವಾದ ನನ್ನ ಮೇಲಿದೆ. ಅಲ್ಲಿಗೆ ಹೋಗಬೇಕು ಎಂದುಕೊಂಡಿದ್ದೇನೆ. ನೀವು ಪ್ರತಿ ಬಾರಿ ನನಗೆ ಬೆಂಬಲ ನೀಡಿದ್ದೀರಿ, ಪ್ರೋತ್ಸಾಹಿಸಿದ್ದೀರಿ. ಮತ್ತಷ್ಟು ಹಾರ್ಡ್ ವರ್ಕ್, ಮತ್ತಷ್ಟು ಕಷ್ಟಪಟ್ಟು ಕೆಲಸ ಮಾಡಿ ಮತ್ತಷ್ಟು ಎತ್ತರಕ್ಕೆ ಏರುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ. ನಿಮ್ಮ ಬೆಂಬಲ ಹೀಗೆ ಇರಲಿ ಎಂದು ನಾನು ಬಯಸುತ್ತಿದ್ದೇನೆ. ನೀವು ಯಾವತ್ತು ನನ್ನ ಮನಸ್ಸಲ್ಲಿರುತ್ತೀರಿʼ ಎಂದು ಹೇಳಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಎಂದು ಕಮೆಂಟ್ ಹಾಕುತ್ತಿದ್ದಾರೆ. ರಶ್ಮಿಕಾ ನಟನೆಯ ಪುಷ್ಪ-2 ಸಿನಿಮಾ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಇದರೊಂದಿಗೆ ಗರ್ಲ್ಫ್ರೆಂಡ್, ಛಾಯಾ, ರೈನ್ಬೋ, ನಟ ಸಲ್ಮಾನ್ ಜೊತೆಗಿನ ಸಿಕಂದರ್, ಕುಬೇರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಬ್ಯೂಸಿಯಾಗಿದ್ದಾರೆ.