ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 62 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ರವಿಚಂದ್ರನ್ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಭಿಮಾನಿಗಳ ಜತೆ ಬರ್ತ್ಡೇ ಸೆಲೆಬ್ರೆಟ್ ಮಾಡಿಕೊಳ್ಳಲಿರುವ ರವಿಚಂದ್ರನ್ ನಿವಾಸದ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಕೊರೊನದಿಂದಲೂ ಹುಟ್ಟುಹಬ್ಬ ಆಚರಿಸಿಕೊಳ್ಳದ ನಟ ರವಿಚಂದ್ರನ್, ಸದ್ಯಕ್ಕೆ ದಿ ಜಡ್ಜ್ ಮೆಂಟ್ ಚಿತ್ರ ಯಶಸ್ವಿಯಾಗಿರುವ ಖುಷಿಯಲ್ಲಿದ್ದಾರೆ.