ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನ. ಅಂಬಿ ನಮ್ಮನ್ನಗಲಿ ಐದು ವರ್ಷ ಕಳೆದರೂ ಅವರ ಅಭಿಮಾನಿಗಳು ಇಂದಿಗೂ ಅವರನ್ನು ನೆನೆಪಿಸಿಕೊಳ್ಳುತ್ತಾರೆ. ಅಂಬಿ ಅವರ 72 ನೇ ಜನ್ಮದಿನವಾದ ಇಂದು ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ಸೊಸೆ ಅವಿವಾ ಅಭಿಷೇಕ್ ಹಾಗೂ ರಾಕ್ಲೈನ್ ವೆಂಕಟೇಶ್ ಕಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು.
ಅಂಬರೀಶ್ ಮಾಡಿದ ಸಮಾಜಮುಖಿ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂಡಿರುವ ಜನರು, ಅಂಬಿ ಇದ್ದಾಗ ಎಷ್ಟು ಪ್ರೀತಿ ತೋರಿಸ್ತಿದ್ರೋ ಅಷ್ಟೇ ಪ್ರೀತಿ ಅಭಿಮಾನ ತೋರಿಸ್ತಿದ್ದಾರೆ. ಮಂಡ್ಯದಲ್ಲಿ ಪ್ರತಿವರ್ಷದಂತೆ ಇಂದು ಕೂಡ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.