ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಗೆ ಬೆಂಗಳೂರು ಪೊಲೀಸರು ಶಾಕ್ ಕೊಟ್ಟಿದ್ದಾರೆ. ಗನ್ ಲೈಸೆನ್ಸ್ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಸದ ನಂತರವೂ ನಟ ದರ್ಶನ್ ಅವರಿಗೆ ನಿರಾಸೆಯಾಗಿದೆ. ಇದೀಗ ನಟ ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಮುಗಿಯುವ ತನಕ ದರ್ಶನ್ಗೆ ಗನ್ ಬಳಸುವ ಭಾಗ್ಯ ಇಲ್ಲ. ದರ್ಶನ್ ಕೊಟ್ಟ ಕಾರಣ ಪರಿಗಣಿಸದೇ ಪೊಲೀಸರು ನಟನ ಗನ್ ಲೈಸೆನ್ಸ್ ಅಮಾನತ್ತಿನಲ್ಲಿಟ್ಟಿದ್ದಾರೆ. ಕೂಡಲೇ ಗನ್ ಸರೆಂಡರ್ ಮಾಡಲು ಸೂಚನೆ ಕೂಡಾ ನೀಡಲಾಗಿದೆ.
ಆರ್ ಆರ್ ನಗರ ಪೊಲೀಸರಿಗೆ ಗನ್ ಸರೆಂಡರ್ ಮಾಡಲು ಸೂಚನೆ ನೀಡಲಾಗಿದ್ದು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಈ ಕೇಸ್ ಮುಗಿಯೋವರೆಗೂ ಗನ್ ಬಳಸುವಂತಿಲ್ಲ. ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವುದರಿಂದ ನಟನ ಗನ್ ಲೈಸೆನ್ಸ್ ಕ್ಯಾನ್ಸಲ್ಗೆ ಪೊಲೀಸರು ಪತ್ರ ಬರೆದಿದ್ದಾರೆ.
ಈ ಹಿಂದೆ ಪೊಲೀಸ್ ನೋಟಿಸ್ ಗೆ ಉತ್ತರ ನೀಡಿದ್ದ ನಟ ದರ್ಶನ್ ಅವರು ನನಗೆ ಗನ್ ಬೇಕೆ ಬೇಕು ಎಂದು ಉತ್ತರಿಸಿದ್ದರು. ನಾನೊಬ್ಬ ಸೆಲೆಬ್ರಿಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರ್ತಾರೆ ಎಂದು ದರ್ಶನ್ ಕಾರಣ ಕೊಟ್ಟಿದ್ದರು. ಪೊಲೀಸ್ ನೋಟಿಸ್ ಗೆ ಉತ್ತರ ನೀಡಿದ್ದ ನಟ ದರ್ಶನ್ ಅವರು ನನಗೆ ಗನ್ ಬೇಕೆ ಬೇಕು ಎಂದು ಉತ್ತರಿಸಿದ್ದರು. ನಾನೊಬ್ಬ ಸೆಲೆಬ್ರಿಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರ್ತಾರೆ ಎಂದು ದರ್ಶನ್ ಕಾರಣ ಕೊಟ್ಟಿದ್ದರು.
ಕೊಲೆ ಕೇಸ್ ಮುಗಿದು ಆರೋಪ ಮುಕ್ತವಾಗವವರೆಗೂ ಗನ್ ಲೈಸೆನ್ಸ್ ತಾತ್ಕಾಲಿಕ ಅಮಾನತು ಮಾಡಲಾಗಿದೆ. ನಗರ ಪೊಲೀಸ್ ಇಲಾಖೆ ಆಡಳಿತ ವಿಭಾಗ ಡಿಸಿಪಿಯಿಂದ ಆರ್ ಆರ್ ನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ:https://chat.whatsapp.com/HWayJDSBf9aI06q6jplPgc