ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್, ಪೊಲೀಸ್ ಸ್ಟೇಷನ್ ಸೆಲ್ನಲ್ಲಿ ಹೇಗಿದ್ದಾರೆ. ಕೊಲೆ ಆರೋಪಕ್ಕೆ ಪಶ್ಚಾತಾಪ ಪಡ್ತಿದ್ದಾರೋ ಇಲ್ವೋ? ತನಿಖಾಧಿಕಾರಿಗಳು ಕೇಳೋ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡ್ತಿದ್ದಾರೋ ಇಲ್ವೋ? ಅನ್ನೋ ಕುತೂಹಲ ಸಾಮಾನ್ಯ ಜನರಲ್ಲಿ ಇದ್ದೇ ಇರುತ್ತೆ. ಹಾಗಾದರೆ ಮೂಲಗಳ ಮಾಹಿತಿ ಏನು ಇರಬಹುದು..?
ಪ್ರತ್ಯೇಕ ಸೆಲ್ನಲ್ಲಿ ದಾಸನ ವಾಸ ಹೇಗಿದೆ..?
- ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರತ್ಯೇಕ ಸೆಲ್ನಲ್ಲಿ ದರ್ಶನ್
- ಈ ಪ್ರತ್ಯೇಕ ಸೆಲ್ಗೆ ಬೇರೆ ಆರೋಪಿಗಳು ಬರಲು ಅವಕಾಶವಿಲ್ಲ
- ಸ್ವತಃ ಪವಿತ್ರಾ ಗೌಡ ಕೂಡ ದರ್ಶನ್ ಮಾತಾಡಿಸಲು ಮುಂದಾಗುತ್ತಿಲ್ಲ ಅನ್ನೋದ್ ಮೂಲಗಳ ಮಾಹಿತಿ
- ಸರಿಯಾಗಿ ಊಟ, ತಿಂಡಿ ಮಾಡ್ತಿಲ್ವಂತೆ
- ಆರಂಭದಲ್ಲಿ ಎರಡು ದಿನ ತನಗೆ ಊಟ ಬೇಡ, ಜ್ಯೂಸ್ ಕೊಡಿ ಅಂತಾ ತರಿಸ್ಕೊಂಡ್ ಕುಡೀದಿದ್ರಂತೆ
- ಒಮ್ಮೆ ಇಡ್ಲಿ ಬೇಕು ಅಂತಾ ಹೇಳಿದ್ರು, ಪೊಲೀಸ್ರು ತರಿಸಿಕೊಟ್ಟಿದ್ರಂತೆ
- ಮಧ್ಯಾಹ್ನ ಮತ್ತು ರಾತ್ರಿ ಊಟದ ವೇಳೆ ಅನ್ನ ಸಾಂಬಾರ್ ನೀಡಲಾಗ್ತಿದೆ
- ಆದರೆ ದರ್ಶನ್ ಜೂನ್ 11 ರಂದು ಸ್ಟೇಷನ್ಗೆ ಹೋದಾಗಿಂದ ಇಲ್ಲಿಯವರೆಗೂ ಒಂದೇ ಒಂದು ಟೈಮ್ನಲ್ಲಿಯೂ ಪೂರ್ತಿ ಊಟ ಮಾಡಿಲ್ವಂತೆ
- ಪ್ರತ್ಯೇಕ ಸೆಲ್ನಲ್ಲಿ 1 ಚಾಪೆ, ಒಂದು ಚೇರ್
- ಹೊರಗಡೆ ಸ್ಥಳ ಮಹಜರು, ನ್ಯಾಯಾಧೀಶರ ಮುಂದೆ ಹಾಜರು ಪಡ್ಸೋದು, ವಿಚಾರಣೆ ಟೈಮ್ ಬಿಟ್ರೆ ದಿನ ನಿಡೀ ಇದೇ ರೂಮ್ನಲ್ಲಿ ಇರ್ತಾರೆ
- ಸಂದರ್ಭದಲ್ಲಿ ಚೇರ್ ಮೇಲೆ ಕುಳಿತುಕೊಳ್ಳುವುದಕ್ಕಿಂತ ಚಾಪೆ ಮೇಲೆ ಜಾಸ್ತಿ ಕುಳಿತು ಜಾಸ್ತಿ ಟೈಮ್ ಕಳೆಯುತ್ತಿದ್ದಾರಂತೆ
- ಚಾಪೆ ಮೇಲೆ ಕುಳಿತಾಗ ದರ್ಶನ್ ಮೌನಕ್ಕೆ ಶರಣಾಗುತ್ತಿದ್ರಂತೆ
- ಆರಂಭದಲ್ಲಿ ಒಂದೆರಡು ದಿನ ದರ್ಶನ್ ಸರಿಯಾಗಿ ನಿದ್ರೆ ಮಾಡ್ತಿರಲಿಲ್ಲವಂತೆ
- ಮೊದಲೆಲ್ಲ ತಡ ರಾತ್ರಿ ನಿದ್ರೆಗೆ ಜಾರುತ್ತಿದ್ರು. ಬಟ್ ಬರ್ತಾ ಬರ್ತಾ ಬೇಗ ನಿದ್ರೆಗೆ ಜಾರ್ತಿದ್ದಾರಂತೆ
- ಬೆಳಗ್ಗೆ ಬೇಗ ಎದ್ದೇಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಯ ನಂತರ ವಿಚಾರಣೆ ಅನ್ನೋದು ಶುರುವಾಗುತ್ತೆ
ಅದೆಷ್ಟೋ ದೊಡ್ಡ ವ್ಯಕ್ತಿಯಾಗಿದ್ರೂ ಸ್ಟೇಷನ್ನಲ್ಲಿ ಸಿಗರೇಟ್ ಸಿಗೋದಿಲ್ಲ. ಹೀಗಾಗಿ ಚೈನ್ ಸ್ಮೋಕ್ ಮಾಡೋರು, ಸಿಗರೇಟ್ ಹ್ಯಾಬಿಟ್ ಇದ್ದವ್ರು ಒಂದ್ ಕ್ಷಣ ಸ್ಟೇಷನ್ ಮೆಟ್ಟಿಲು ಏರ್ತಾ ಇದ್ದಂತೆ ಕಂಗಾಲಾಗೋದು ಪಕ್ಕಾ. ಪೊಲೀಸರ ಬಳಿ ಸಿಗರೇಟ್ ಬೇಕು ಅಂತಾ ಪರಿಪರಿಯಾಗಿ ಕೇಳ್ಕೊಂಡಿದ್ದಾರೆ. ಆದ್ರೆ ಪೊಲೀಸರು ಸಿಗರೇಟ್ ವ್ಯವಸ್ಥೆ ಮಾಡಿಲ್ಲ.