- ಹೆಣ್ಣು ಮಗುವಿಗೆ, ಕುಟುಂಬಕ್ಕೆ ನ್ಯಾಯ ಸಿಗಬೇಕು
- ಕನ್ನಡ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಅಂಡ್ ಗ್ಯಾಂಗ್ ಪೊಲೀಸರ ವಶದಲ್ಲಿದ್ದಾರೆ. ಈ ಪ್ರಕರಣ ಸಂಬಂಧ ಕಿಚ್ಚ ಸುದೀಪ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಆ ಹೆಣ್ಣು ಮಗುವಿಗೆ, ಕುಟುಂಬಕ್ಕೆ ನ್ಯಾಯ ಸಿಗಬೇಕು
ಈ ಬಗ್ಗೆ ಮಾತಾಡಿದ ಅವರು, ಮಾಧ್ಯಮಗಳಿಂದ ಈ ವಿಚಾರದ ಬಗ್ಗೆ ತಿಳಿದುಕೊಳ್ಳುತ್ತಿದ್ದೀವಿ. ಸತ್ಯ ಹೊರ ಬರಬೇಕು ಅಂತ ಪೊಲೀಸರು, ಮಾಧ್ಯಮಗಳು ಶ್ರಮವಹಿಸುತ್ತಿದ್ದಾರೆ. ಆ ಹೆಣ್ಣು ಮಗುವಿಗೆ, ಕುಟುಂಬಕ್ಕೆ ನ್ಯಾಯ ಸಿಗಬೇಕು. ರೇಣುಕಾಸ್ವಾಮಿಗೆ ಹುಟ್ಟಬೇಕಾಗಿರುವ ಆ ಮಗುವಿಗೆ ನ್ಯಾಯ ಸಿಗಬೇಕು. ಕೊಲೆ ಪ್ರಕರಣ ಉತ್ತಮವಾಗಿ ತನಿಖೆಯಾಗಬೇಕು. ಸಂಪೂರ್ಣ ವಾತಾವರಣ ಸರಿಯಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು ಅಂತ ಹೇಳಿದ್ದಾರೆ.
ನಾವು ಯಾರನ್ನೂ ಬ್ಯಾನ್ ಮಾಡಲು ಆಗಲ್ಲ
ಇನ್ನು, ನಟ ದರ್ಶನ್ರನ್ನ ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಕಿಚ್ಚ ಸುದೀಪ್, ನಾವು ಯಾರನ್ನೂ ಬ್ಯಾನ್ ಮಾಡಲು ಆಗಲ್ಲ. ಈ ಕೇಸ್ನಿಂದ ಹೊರಗೆ ಬಂದರೆ ಬ್ಯಾನ್ ಅನ್ನುವ ಪದ ಬರಲ್ಲ ಎಂದರು.