- ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ಗೆ ಮತ್ತೆ 2 ದಿನ ಪೊಲೀಸ್ ಕಸ್ಟಡಿಗೆ
- ದರ್ಶನ್ ಪ್ರಕರಣದ ಬಗ್ಗೆ ಸಂಸದೆ ಸುಮಲತಾ ಮೌನವೇಕೆ ಎಂದ ನಟ ಚೇತನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಸೇರಿ ಒಟ್ಟು 13 ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲಾಗಿದೆ. ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಮತ್ತೆ 2 ದಿನ ದರ್ಶನ್, ಧನರಾಜ್, ವಿನಯ್, ಪ್ರದೂಶ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಎ1 ಆರೋಪಿ ಪವಿತ್ರಗೌಡ ಸೇರಿದಂತೆ ಉಳಿದ ಆರೋಪಿಗಳಿಗೆ ನ್ಯಾಯಾಂಗ ಬಂಧನವಾಗಿದೆ.
ಈ ಮಧ್ಯೆ ನಟ ಚೇತನ್ ಅಹಿಂಸಾ ಅವರು ದರ್ಶನ್ ಪ್ರಕರಣದಲ್ಲಿ ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮೌನವನ್ನು ಪ್ರಶ್ನಿಸಿದ್ದಾರೆ. ದರ್ಶನ್ ಹಿರಿಯ ಮಗನ ಬಗ್ಗೆ ಸುಮಲತಾ ಯಾಕೆ ಮಾತಾಡ್ತಿಲ್ಲ? ರಾಜಕೀಯ ಉದ್ದೇಶದಿಂದ ದರ್ಶನ್ ಪವರ್ ಬಳಸಿಕೊಂಡು ಈಗ ಸುಮ್ಮನಿರೋದೇಕೆ ಅಂತ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ನಟ ಚೇತನ್ ಅಹಿಂಸಾ ಅವರು, ಬಹುತೇಕ ಕೆ. ಎಫ್. ಐ. ವ್ಯಕ್ತಿಗಳು ದರ್ಶನ್ ಪ್ರಕರಣದ ಬಗ್ಗೆ ಮೌನವಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ದರ್ಶನ್ ಅವರ ಸ್ಟಾರ್ ಪವರ್ ಅನ್ನು ಬಳಸಿದ ಸುಮಲತಾ ಅಂಬರಿಶ್ ಅವರನ್ನು ತಮ್ಮ ‘ಹಿರಿಯ ಮಗ’ ಎಂದು ಕರೆದಿದ್ದರು. ತನ್ನ ಮಗನ ಇತ್ತೀಚಿನ ಘಟನೆಗಳ ಬಗ್ಗೆ ಸುಮಲತಾ ಏನು ಹೇಳುತ್ತಾರೆ? ತಲೆ ಮರೆಸಿಕೊಳ್ಳುವುದು ಒಂದು ಆಯ್ಕೆಯಾಗಿರಬಾರದು ಅಂತ ಬರೆದುಕೊಂಡಿದ್ದಾರೆ.