ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಘಟನೆ ಬಗ್ಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರೆಟಿಗಳೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಟ ಡಾಲಿ ಧನಂಜಯ್ ಮೌನ ಮುರಿದ್ದಾರೆ. ಆರೋಪಿಗಳು ನಮ್ಮವರೇ ಆಗಿದ್ದಾಗ, ನಾವು ಏನು ಹೇಳೋಕೆ ಸಾಧ್ಯ..? ಹಾಗೇನೇ ಕೊಲೆಯದವರ ಜಾಗದಲ್ಲಿ ನಾವು ಇದ್ದಾಗ ಏನ್ ಮಾಡೋಕೆ ಸಾಧ್ಯ..? ಆ ಮನುಷ್ಯನ ತಂದೆ ತಾಯಿ ಮುಖ ನೋಡಿದಾಗ ಬೇಜಾರಾಗುತ್ತೆ. ಕಾನೂನಿಗಿಂತ ದೊಡ್ಡವರು ಯಾರಿಲ್ಲ. ಎಲ್ಲರಿಗಿಂತ ಕಾನೂನು ದೊಡ್ಡದು. ‘ತಪ್ಪು ನಡೆದಿದ್ದರೆ ಶಿಕ್ಷೆ ಆಗಲಿ. ನಡೆದ ಕೃತ್ಯನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಬದುಕು ಅವಕಾಶಗಳನ್ನು ಕೊಟ್ಟೇ ಕೊಡುತ್ತದೆ. ಮತ್ತೆ ಬಂದು ದರ್ಶನ್ ಪ್ರೇಕ್ಷಕರನ್ನು ಮನರಂಜಿಸಲಿ’ ಎಂದಿದ್ದಾರೆ.