- ದರ್ಶನ್ ಸೇರಿ ನಾಲ್ಕು ಆರೋಪಿಗಳು ಕಸ್ಟಡಿಗೆ
- ಮತ್ತೆ ಎರಡು ದಿನಗಳ ಕಾಲ ನಾಲ್ವರು ಆರೋಪಿಗಳು ಕಸ್ಟಡಿಗೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿ 17 ಆರೋಪಿಗಳನ್ನು ಇಂದು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಈ ಕೇಸ್ನಲ್ಲಿ ನಟ ದರ್ಶನ್ ಕೋರ್ಟ್ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಮಹತ್ವದ ಆದೇಶ ನೀಡಿದೆ. ದರ್ಶನ್ ಅವರನ್ನು ಇನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದ್ದರು. ಇದನ್ನು ಎಸ್ಪಿಪಿ ವಾದ ಪುರಸ್ಕರಿಸಿ ಎರಡು ದಿನಗಳ ಕಾಲ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೋರ್ಟ್ಗೆ ಹಾಜರಾದ ಆರೋಪಿಗಳನ್ನ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡ ಅವರು ವಿಚಾರಣೆ ನಡೆಸಿದರು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ದರ್ಶನ್, ಧನರಾಜ್, ವಿನಯ್, ಪ್ರದೂಶ್ ಕಸ್ಟಡಿ ವಿಸ್ತರಣೆ ಮಾಡಲಾಗಿದೆ.