ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂದ ಪಟ್ಟಂತೆ ದರ್ಶನ್-ಪವಿತ್ರಾಗೌಡ ಗ್ಯಾಂಗ್ ಈಗಾಗಲೇ ಜೈಲು ಸೇರಿದೆ. ಈ ಸಂಬಂಧ ಪೋಲಿಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ದರ್ಶನ್ ಸೇರಿದಂತೆ 10 ಜನರ ಬೆರಳಚ್ಚು ಹೋಲಿಕೆ ಆಗಿದೆ ಅನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. FSL ವರದಿಯ ಪ್ರಕಾರ ನಟ ದರ್ಶನ್ ಸೇರಿದಂತೆ 10 ಜನರ ಬೆರಳಚ್ಚು ಹೋಲಿಕೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಟ್ಟಣಗೆರೆ ಶೆಡ್ , ಶವ ಎಸೆದ ಜಾಗ, ಶವ ಸಾಗಿಸಿದ ವಾಹನ , ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲಿ ಸಿಕ್ಕ ಬೆರಳಚ್ಚಿಗೂ ಆರೋಪಿಗಳ ಬೆರಳಚ್ಚಿಗೂ ಹೋಲಿಕೆಯಾಗಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಕೊಲೆಯಾದ ರೇಣುಕಾಸ್ವಾಮಿ ದೇಹ ಮತ್ತು ಬಟ್ಟೆಯ ಬೆರಳಚ್ಚು ಸಂಗ್ರಹಿಸಿದ್ದು FSL ವರದಿಯಲ್ಲಿ ತಿಳಿಸಿ ಈಗ ಆರೋಪಿಗಳ ಬೆರಳಚ್ಚಿಗೂ ಮತ್ತು ಕೊಲೆಯಾದ ರೇಣುಕಾಸ್ವಾಮಿ ದೇಹ ಮತ್ತು ಬಟ್ಟೆಯ ಮೇಲಿನ ಬೆರಳಚ್ಚೂ ಒಂದೇ ಅಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.