ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ಅವರ ಪತ್ನಿ ಹಾಗೂ ಸೋದರ ಭೇಟಿಯಾಗಿ ಸೋಮವಾರ ಮಾತುಕತೆ ನಡೆಸಿದರು. ಕಾರಾಗೃಹ ಅಧಿಕಾರಿಗಳ ಪೂರ್ವಾನುಮತಿ ಪಡೆದು ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಹಾಗೂ ಸೋದರ ದಿನಕರ ತೂಗುದೀಪ ಭೇಟಿಯಾದರು. ಈ ವೇಳೆ ಮುಂದಿನ ಕಾನೂನು ಹೋರಾಟದ ಕುರಿತು ತಮ್ಮ ಕುಟುಂಬದವರೊಂದಿಗೆ ದರ್ಶನ್ ಸಮಾಲೋಚಿಸಿದ್ದಾರೆ. ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸುಬ ಬಗ್ಗೆ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದು ವಿಜಯಲಕ್ಷ್ಮೀ ಯವರ 4 ನೇ ಭೇಟಿಯಾಗಿದೆ.