- ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿದ ಧ್ರುವ ಅಭಿಮಾನಿ ಸಂಘ ಮತ್ತು ತಂಡ
- ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ ಆಕ್ಷನ್ ಪ್ರಿನ್ಸ್ ಧ್ರುವ
- ರೇಣುಕಾಸ್ವಾಮಿ ಕುಟುಂಬಕ್ಕೆ ಧನಸಹಾಯ ಮಾಡಿದ ಧ್ರುವ ಅಭಿಮಾನಿಗಳು
ನಟ ದರ್ಶನ್ ಗ್ಯಾಂಗ್ನಿಂದ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ ಮತ್ತು ತಂಡ ಇಂದು ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಕ್ಷನ್ ಪ್ರಿನ್ಸ್ ಕೂಡ ದೂರವಾಣಿ ಮೂಲಕ ಮಾತನಾಡಿ, ನಿಮ್ಮೊಂದಿಗೆ ಸದಾ ನಾವು ಇದ್ದೀವಿ.. ಏನೇ ಇದ್ದರೂ ತಿಳಿಸಿ.. ಎಂದು ನಟ ಧ್ರುವ ಸರ್ಜಾ ಸಾಂತ್ವನ ಹೇಳಿದರು. ಮಗನ ಸಾವಿನ ನೋವಿನಲ್ಲಿ ದಿನದೂಡುತ್ತಿರೋ ರೇಣುಕಾಸ್ವಾಮಿ ಕುಟುಂಬಕ್ಕೆ ಧ್ರುವ ಅಭಿಮಾನಿಗಳು ಧನಸಹಾಯ ಮಾಡಿ, ಅವರ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ.