- ರೇಣುಕಾಸ್ವಾಮಿ ಮೇಲೆ ಆಗಿರುವ ಪ್ರಯೋಗ ತುಂಬಾ ತಪ್ಪು
- ಯಾರೇ ಮಾಡಿದ್ರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು
ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ಆರೋಪಿಯಾಗಿರುವ ನಟ ದರ್ಶನ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬೆನ್ನಲ್ಲೇ ನಿರ್ದೇಶಕ ಕಮ್ ನಿರ್ಮಾಪಕ ಓಂ ಪ್ರಕಾಶ್ ರಾವ್ ಪ್ರತಿಕ್ರಿಯೆ ನೀಡಿದ್ದು, ಅಪಾರ ಅಭಿಮಾನಿಗಳ ಬಳಗ ಹೊಂದಿರುವ ದರ್ಶನ್ ಸಣ್ಣ ಕಾರಣಕ್ಕೆ ಹೀಗೆಲ್ಲಾ ಮಾಡಿಕೊಂಡರು. ರೇಣುಕಾಸ್ವಾಮಿ ಮೆಸೇಜ್ ಮಾಡಿರೋದು ಅಷ್ಟೇ. ಇದು ಸಣ್ಣ ವಿಚಾರ. ರೇಣುಕಾಸ್ವಾಮಿ ಮೇಲೆ ಆಗಿರುವ ಪ್ರಯೋಗ ತುಂಬಾ ತಪ್ಪು ಅನಸ್ತು. ಇದನ್ನು ಯಾರೇ ಮಾಡಿದ್ರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಮ್ಮ ಕರ್ನಾಟಕ ಪೊಲೀಸ್ ವಿಚಾರಣೆ ಮಾಡಿರುವ ರೀತಿ, ಅವರು ಇಟ್ಟಿರುವ ಹೆಜ್ಜೆ ಗ್ರೇಟ್.. ಎಂದು ಓಂ ಪ್ರಕಾಶ್ ಹೇಳಿದ್ದಾರೆ.
ಅಂತಹ ಮೇಧಾವಿ ನಟ ದರ್ಶನ್ ಈಗ ಆರೋಪಿ ಸ್ಥಾನದಲ್ಲಿ ನಿಂತಿರೋದು ನಿಜಕ್ಕೂ ಬೇಜಾರು ಆಗ್ತಿದೆ. ನಾನು ಈಗ ದರ್ಶನ್ರನ್ನು ಭೇಟಿ ಮಾಡದೇ 10 ವರ್ಷಗಳಾಗಿವೆ. ಆದರೆ ಅವರು ಒಳ್ಳೆಯ ವ್ಯಕ್ತಿ. ಕನ್ನಡಿಗರಿಗೆ ಅವಕಾಶ ಸಿಗಬೇಕು ಎಂಬ ಮನೋಭಾವನೆ ಅವರಿಗಿದೆ. ಕೆಲ ವೈಯಕ್ತಿಕ ಕಾರಣಗಳಿಂದ ಅವರ ಜೊತೆ ಇಬ್ಬರೂ ದೂರ ಆದೆವು ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ರೇಣುಕಾಸ್ವಾಮಿ ಮಾಡಿರೋದು ಘನಘೋರ ಅಪರಾಧ ಅಲ್ಲ. ಪೊಲೀಸ್ ಅಧಿಕಾರಿಗಳ ಸಹಾಯ ತೆಗೆದುಕೊಂಡು ಸರಿ ಮಾಡಬಹುದಿತ್ತು. ಆ ಥರ ಚಿತ್ರಹಿಂಸೆ ಕೊಡಬಾರದಿತ್ತು. ದೊಡ್ಡ ನಟನಾಗಿ ಈ ಸ್ಥಾನದಲ್ಲಿ ನಿಲ್ಲಬಾರದಿತ್ತು ಎಂದಿದ್ದಾರೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಯಾವ ಪ್ರಭಾವಕ್ಕೂ ಮಣಿಯದೇ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಓಂ ಪ್ರಕಾಶ್ ಎಂದರು.