ರಾಕಿಂಗ್ ಸ್ಟಾರ್ ಯಶ್ ಸಿನಿಮಾದಿಂದಾಗಿ ಎಷ್ಟು ಜನಪ್ರಿಯತೆ ಪಡೆದಿದ್ದರೋ ಅಷ್ಟೇ ಜನಪ್ರಿಯತೆ ಅವರ ಹೇರ್ ಸ್ಟೈಲ್ ಮೂಲಕ ಪಡೆದಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಉದ್ದನೆಯ ಕೂದಲು, ಉದ್ದನೆಯ ಗಡ್ಡ ಬಿಟ್ಟು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಯಶ್ ಲುಕ್ ಇದ್ದಕ್ಕಿದ್ದಂತೆಯೇ ಬದಲಾಗಿದೆ. ರಾಕಿ ಭಾಯ್ ಉದ್ದ ಕೂದಲಿಗೆ ಕತ್ತರಿ ಪ್ರಯೋಗಿಸಿದ್ದಾರೆ.
ಕೆಜಿಎಫ್, ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಕೆಜಿಎಫ್ 3 ಸಿನಿಮಾ ತೆರೆ ಮೇಲೆ ಬರಲು ಬಾಕಿ ಉಳಿದಿದೆ. ಆದರೆ ಇದರ ನಡುವೆ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೂಡ ಮಾಡುತ್ತಿದ್ದಾರೆ. ಶೂಟಿಂಗ್ ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಇದಲ್ಲದೆ ಬಾಲಿವುಡ್ನಲ್ಲಿ ‘ರಾಮಾಯಣ’ ಸಿನಿಮಾಗೂ ಬಂಡವಾಳ ಹಾಕಿದ್ದು, ಅದರಲ್ಲಿ ‘ರಾವಣ’ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ಯಶ್ ಸಡನ್ ಆಗಿ ತಮ್ಮ ಕೂದಲಿಗೆ ಕತ್ತರಿ ಪ್ರಯೋಗಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸದ್ಯ ರಾಕಿಂಗ್ ಸ್ಟಾರ್ ಯಶ್ನ ಹೊಸ ಲುಕ್ ಎಲ್ಲರಿಗೂ ಇಷ್ಟವಾಗಿದೆ.