ಸಲಾರ್ 2 ಸ್ಟಾಪ್ ಆಯ್ತು ಅನ್ನೋ ಸುದ್ದಿ ಸಂಚಲನದ ಬೆನ್ನಲ್ಲೇ ಸಲಾರ್ 2 ಬಗ್ಗೆ ಬಡಾ ಬ್ರೇಕಿಂಗ್ ಸುದ್ದಿಗಳು ಹೊರಬೀಳ್ತಿವೆ. ಇದೀಗ ಖುದ್ದು ಸಲಾರ್ ಕ್ಯಾಪ್ಟನ್ ಪ್ರಶಾಂತ್ ನೀಲ್ ಸೀಕ್ವೆಲ್ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ಸಲಾರ್ ಪಾರ್ಟ್ 2 ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ನೀಡುವುದಾಗಿ ತಿಳಿಸಿದ್ದಾರೆಂದು ಟಿಟೌನ್ ಮೀಡಿಯಾಗಳು ಸುದ್ದಿ ಮಾಡ್ತಿವೆ.
ಇಂಟ್ರೆಸ್ಟಿಂಗ್ ಅಂದರೆ ಕೆಜಿಎಫ್ 3 ಬಗ್ಗೆಯೂ ನೀಲ್ ಸಾಹೇಬ್ರು ತುಟಿ ಬಿಚ್ಚಿ ಮಾತನಾಡಿದ್ದಾರೆ. ಹಿಂದೊಮ್ಮೆ ಕೆಜಿಎಫ್ 3 ಗೆ ನಾನು ಆಕ್ಷನ್ ಕಟ್ ಹೇಳ್ತಿನೋ? ಇಲ್ವೋ ? ನನಗೆ ಡೌಟಿದೆ ಅನ್ನೋ ಮಾತುಗಳನ್ನಾಡಿದ್ದರು. ಆದರೆ, ಕೆಜಿಎಫ್ 3 ಬರೋದು ಪಕ್ಕಾ ಅಂತಲೂ ತಿಳಿಸಿದ್ದರು. ಆದರೆ, ನೀಲ್ ಸಲಾರ್ 2, ಎನ್ ಟಿ ಆರ್ 31 ಘೋಷಣೆ ಮಾಡಿದ್ದರಿಂದ, ರಾಕಿ ಭಾಯ್ ಕೆಜಿಎಫ್ ಟೀಮ್ ಬಿಟ್ಟು ಟಾಕ್ಸಿಕ್ ತಂಡ ಕಟ್ಟಿದ್ದರಿಂದ, ಕೆಜಿಎಫ್ 3 ಡೌಟ್ ಎನ್ನಲಾಗಿತ್ತು. ಇದೀಗ, ಮತ್ತೊಮ್ಮೆ ನೀಲ್ ಸಾಹೇಬ್ರು ಕೆಜಿಎಫ್ 3 ಬಗ್ಗೆ ಮಾತನಾಡಿರೋದ್ರಿಂದ ಸಿನಿಮಾ ಪ್ರೇಮಿಗಳು ಕಿವಿಯರಳಿಸಿದ್ದಾರೆ.
ಕೆಜಿಎಫ್ 3 ಸ್ಟೋರಿ, ಸ್ಕ್ರೀನ್ ಪ್ಲೇ ರೈಟಿಂಗ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಸದ್ಯ, ಹೊಂಬಾಳೆ ಸಂಸ್ಥೆ ಬೇರೆ ಬೇರೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ನಟ ಯಶ್ ಕೂಡ ದುಬಾರಿ ಬಜೆಟ್ ನ ಟಾಕ್ಸಿಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ತಮ್ಮ ಕೈಯಲ್ಲಿರೋ ಸಿನಿಮಾಗಳನ್ನ ಮುಗಿಸಿ ಫ್ರೀಯಾದರೆ ಕೆಜಿಎಫ್ 3 ಆರಂಭ ಎಂದಿದ್ದಾರೆ ಕ್ಯಾಪ್ಟನ್ ನೀಲ್. ಈ ಸುದ್ದಿ ಕೇಳಿ ಪ್ಯಾನ್ ವರ್ಲ್ಡ್ ಫ್ಯಾನ್ಸ್ ಕೂಡ ದಿಲ್ ಖುಷ್ ಆಗಿದ್ದಾರೆ. ಕೆಜಿಎಫ್ ಸಾಮ್ರಾಜ್ಯದ ಚಿನ್ನ ತುಂಬಿಕೊಂಡು ಸಮುದ್ರದಲ್ಲಿ ಮುಳುಗಿರೋ ನರಾಚಿ ಲೋಕದ ರಣಧೀರನ ರೀ ಎಂಟ್ರಿಗಾಗಿ ಕಣ್ಣರಳಿಸಿದ್ದಾರೆ. ಹೇಗಿರಲಿದೆ ರಾಕಿಭಾಯ್ ಗ್ರ್ಯಾಂಡ್ ಎಂಟ್ರಿ? ಎಲ್ಲಿಂದ ಶುರುವಾಗಲಿದೆ ಕೆಜಿಎಫ್ 3 ಜಸ್ಟ್ ವೇಯ್ಟ್ ಆಂಡ್ ವಾಚ್.