ಹೊಂಬಾಳೆ ಸಂಸ್ಥೆ ಸಲಾರ್ ಪಾರ್ಟ್ 2 ನಿರ್ಮಾಣದಿಂದ ಹಿಂದೆ ಸರಿದಿದೆಯಂತೆ. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ರೆಬೆಲ್ ಸ್ಟಾರ್ ಪ್ರಭಾಸ್ ನಡುವೆ ಶೀತಲ ಸಮರವೇ ಸಲಾರ್ 2 ಸ್ಟಾಪ್ ಆಗೋದಕ್ಕೆ ಕಾರಣವಂತೆ .. ಅನ್ನೋ ಸುದ್ದಿ ಸಿನಿದುನಿಯಾದಲ್ಲಿ ಕಳೆದೊಂದು ತಿಂಗಳಿಂದ ಸುಂಟರಗಾಳಿ ಎಬ್ಬಿಸಿತ್ತು. ಸಲಾರ್ 2 ನಿರೀಕ್ಷೆಯಲ್ಲಿದ್ದ ಸಿನಿಮಾ ಪ್ರೇಮಿಗಳನ್ನ ನಿರಾಸೆಗೊಳಿಸಿತ್ತು. ಆದ್ರೀಗ ತೆಲುಗು ಫಿಲ್ಮ್ ನಗರದಿಂದ ತೇಲಿಬಂದಿರೋ ಸುದ್ದಿ, ಚಿತ್ರ ಪ್ರೇಮಿಗಳು ನಿರಾಳರಾಗುವಂತೆ ಮಾಡಿದೆ. ದೇವ ಹಾಗೂ ವರದನ ಜುಗಲ್ ಬಂಧಿನಾ ಕಣ್ಮುಂದೆ ತಂದು ನಿಲ್ಲಿಸಿದೆ. ಹೌದು, ಸಲಾರ್ 2 ಸಿನಿಮಾ ಸ್ಟಾಪ್ ಆಗಿಲ್ವಂತೆ. ಇದೇ ಮೇ ತಿಂಗಳ ಕೊನೆಯಲ್ಲಿ ದೇವ ಉರುಫ್ ಡಾರ್ಲಿಂಗ್ ಪ್ರಭಾಸ್ ಸಲಾರ್ 2 ಅಖಾಡಕ್ಕೆ ಇಳಿಯಲ್ಲಿದ್ದಾರಂತೆ.
ಇನ್ನೂ ಸಲಾರ್ ನ ಎರಡು ಭಾಗದಲ್ಲಿ ತರೋದಕ್ಕೆ ಮೊದಲೇ ಪ್ಲಾನ್ ರೂಪಿಸಿದ್ದ ನೀಲ್ ಸಾಹೇಬ್ರು, ಸೀಕ್ವೆಲ್ ಶೂಟಿಂಗ್ ಗೆ ತುದಿಗಾಲಲ್ಲಿ ನಿಂತಿದ್ದಾರೆ. ಮೇ ಎಂಡ್ ನಿಂದ ಜೂನ್ ಎಂಡ್ ತನಕ ವಿತೌಟ್ ಬ್ರೇಕ್ ಶೂಟಿಂಗ್ ಮಾಡೋದಕ್ಕೆ ಸಿದ್ದತೆ ನಡೆಸಿದ್ದಾರಂತೆ. ಇಡೀ ಪ್ಯಾನ್ ವರ್ಲ್ಡ್ ಕಣ್ಣರಳಿಸಿರೋ ಹೈ ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ನ ಇದೇ ಕ್ರಿಸ್ ಮಸ್ ಗೆ ರಿಲೀಸ್ ಮಾಡಬೇಕು ಅನ್ನೋದು ಕ್ಯಾಪ್ಟನ್ ನೀಲ್ ಹಾಗೂ ಹೊಂಬಾಳೆ ಮಾಲೀಕರ ಮಾಸ್ಟರ್ ಪ್ಲಾನ್ ಅಂತೆ.
ಪ್ರಭಾಸ್ ಕೈಯಲ್ಲಿ ಸದ್ಯ ಮೂರ್ನಾಲ್ಕು ಸಿನಿಮಾಗಳಿವೆ. ಆದರೆ, ಅಮರೇಂದ್ರ ಬಾಹುಬಲಿಯ ಫಸ್ಟ್ ಪ್ರಿಪರೆನ್ಸ್ ಸಲಾರ್ -2 ಅಂತೆ. ಹೀಗಾಗಿ, ರಾಜ ಸಾಬ್ ಚಿತ್ರೀಕರಣದ ನಡುವೆಯೂ ಸಲಾರ್ -2 ಪ್ರಭಾಸ್ ಡೇಟ್ ಕೊಟ್ಟಿದ್ದಾರಂತೆ. ಮೇ ಎಂಡ್ ನಿಂದ ಶೂಟಿಂಗ್ ಶುರು ಮಾಡಿ, ಐ ವಿಲ್ ಜಾಯಿನ್ ಎಂದಿದ್ದಾರಂತೆ. ನಿಮಗೆಲ್ಲ ಗೊತ್ತಿರೋ ಹಾಗೇ ಸಲಾರ್ ಕೂಡ ಬಹುತಾರಾಗಣದ ಚಿತ್ರ. ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿಹಾಸನ್ ಒಳಗೊಂಡಂತೆ ಕನ್ನಡದ ಕಲಾವಿದರು ಕೂಡ ಸಲಾರ್ ನಲ್ಲಿ ಧಗಧಗಿಸಿದ್ದಾರೆ.
ಸದ್ಯ ಪ್ರಭಾಸ್ ಬಹುನಿರೀಕ್ಷಿತ ಕಲ್ಕಿ 2898 ಸಿನಿಮಾದ ಬಿಡುಗಡೆಗಾಗಿ ಎದುರುನೋಡ್ತಿದ್ದಾರೆ. ಮಹಾನಟಿಯ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಿದ್ದು, ಇದೇ ಜೂನ್ 27 ರಂದು ತೆರೆಗೆ ಬರ್ತಿದೆ. ಬಿಗ್ ಬಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಸೇರಿದಂತೆ ಅತೀ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಈ ಸಿನಿಮಾಗಾಗಿ ಇಡೀ ವಿಶ್ವ ಸಿನಿದುನಿಯಾ ಕಾಯ್ತಿದೆ…