ಟಾಲಿವುಡ್ ಬ್ಯೂಟಿ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ.. ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಸ್ಯಾಮ್ ಹೆಸರು ಮತ್ತೊಮ್ಮೆ ಚಾಲ್ತಿಯಲ್ಲಿದೆ.. “ಖುಷಿ” ಸಿನಿಮಾ ಸಕ್ಸಸ್ ನಂತರ ಸದ್ಯ ಸಮಂತಾ ಯಾವುದೇ ಸಿನಿಮಾಗೆ ಸಹಿ ಮಾಡಿಲ್ಲ..
ಆದ್ರೆ ಇದೀಗ ಸಮಂತಾ ಅರೆಬೆತ್ತಲೆ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಸದ್ಯ ಈ ಬಗ್ಗೆ ಚರ್ಚೆ ಶುರುವಾಗಿದ್ದು, ಈ ಫೋಟೋವನ್ನ ಸಮಂತಾ ಸ್ವತ: ಅಪ್ಲೋಡ್ ಮಾಡಿ ಡಿಲೀಟ್ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.. ಮತ್ತೊಂದ್ಕಡೆ ಇದು ಫೇಕ್ ಪೋಟೋ ಅಂತ ಸ್ಯಾಮ್ ಫ್ಯಾನ್ಸ್ ಹೇಳ್ತಿದ್ದಾರೆ..
ಇತ್ತೀಚೆಗೆ ಕೆಲ ನಾಯಕಿಯರ ಈ ರೀತಿಯ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡ ಇಂತದ್ದೊಂದು ಸವಾಲನ್ನ ಎದುರಿಸಿದ್ರು.. ಇದೀಗ ಕೆಲ ಕಿಡಿಗೇಡಿಗಳು ಸ್ಯಾಮ್ ಅರೆಬೆತ್ತಲೆ ಫೋಟೋಸ್ನ್ನ ಫೇಕ್ ಮಾಡಿ ಹರಿಬಿಟ್ಟಿದ್ದಾರೆ.. ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಸಮಂತಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ..