ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲಿನಿಂದ ಹೊರ ಬಂದ ನಂತರ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಮೊಲದ ಬಾರಿಗೆ ಫ್ಯಾಮಿಲಿ ಜೊತೆ ಸಿನಿಮಾ ನೋಡಿದ್ದಾರೆ. ತಮ್ಮ ದಿನಕರ್ ತೂಗುದೀಪ ಅವರ ರಾಯಲ್ ಚಿತ್ರಕ್ಕೆ ದರ್ಶನ್ ಅವರು ಸಾಥ್ ಕೊಟ್ಟಿದ್ದಾರೆ.
ನಟ ದರ್ಶನ್ ಅವರು ಜನವರಿ 20ರಂದು ರಾತ್ರಿ ಅಮ್ಮ ತಮ್ಮನ ಜೊತೆ ರಾಯಲ್ ಚಿತ್ರ ನೋಡಿದ್ದಾರೆ. ಜಯಣ್ಣ ನಿರ್ಮಾಣದ ದಿನಕರ್ ನಿರ್ದೇಶನದ ವಿರಾಟ್ ಅಭಿನಯದ ರಾಯಲ್ ಸಿನಿಮಾ ಇದೇ ವಾರ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಾಯಲ್ ಸಿನಿಮಾ ರಿಲೀಸ್ಗೂ ಮೊದಲೇ ತಮ್ಮ ನಿರ್ದೇಶಿಸಿರುವ ಚಿತ್ರ ನೋಡಿದ ದರ್ಶನ್ ಅವರು ಸಿನಿಮಾ ನೋಡಿ ಫುಲ್ ಎಂಜಾಯ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ ರಿಲೀಸ್ ಆದ ನಂತರ ಸಿನಿಮಾ ಕಡೆ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ದರ್ಶನ್ ಅವರು ಇದೀಗ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದು, ದಿನಕರ್ ನಿರ್ದೇಶನದ ರಾಯಲ್ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ.
ನಮ್ಮ ದಿನಕರ್ ನಿರ್ದೇಶನದ ‘ರಾಯಲ್’ ಚಿತ್ರದ ಟ್ರೈಲರ್ ಬಿಡುಗಡೆಯ ಬಗ್ಗೆ ಜೊತೆಗೆ ರಿಲೀಸ್ ಡೇಟ್ ಕೂಡ ದರ್ಶನ್ ಅನೌನ್ಸ್ ಮಾಡಿದ್ದಾರೆ. ದರ್ಶನ್ ಪೋಸ್ಟ್ನಲ್ಲಿ, ನಮ್ಮ ದಿನಕರ್ ನಿರ್ದೇಶನದ ‘ರಾಯಲ್’ ಚಿತ್ರದ ಟ್ರೈಲರ್ ಈಗಷ್ಟೇ ಬಿಡುಗಡೆಯಾಗಿದೆ. ಒಳ್ಳೆ ತಾರಾಗಣ ಹಾಗೂ ಕಥೆ ಹೊಂದಿರುವ ಈ ಚಿತ್ರವೂ ಯಶಸ್ವಿಯಾಗಲಿ ಎಂದು ಆಶಿಸುತ್ತಾ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರುತ್ತದೆ ಎಂದು ನಂಬಿದ್ದೇನೆ. ಇದೇ ಜನವರಿ 24 ಚಿತ್ರವೂ ನಿಮ್ಮ ಮುಂದೆ ಬರಲಿದೆ’ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನೋಡುತ್ತಿದ್ದಂತೆ ಫ್ಯಾನ್ಸ್ ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಇನ್ನೂ ಕೆಲವರು ಡೆವಿಲ್ ಅಪ್ಡೇಟ್ ಯಾವಾಗ? ಎಂದು ಪ್ರಶ್ನೆ ಇಟ್ಟಿದ್ದಾರೆ. ದಿನಕರ್ ಅಣ್ಣ ನಿರ್ದೇಶನದ ರಾಯಲ್ ಚಿತ್ರಕ್ಕೆ ಶುಭವಾಗಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc