ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಶೇರ್ ಮಾಡ್ತಿರುತ್ತಾರೆ. ನಟಿ ರಾಧಿಕಾ ಅವರ ಹೊಸ ರೀಲ್ಸ್ ಇದೀಗ ಸಖತ್ ವೈರಲ್ ಆಗ್ತಿದೆ. ಮಂಗಳೂರಿನ ಚೆಲುವೆ ರಾಧಿಕಾ ಕಡಲ ತೀರದಲ್ಲಿ ಹೆಜ್ಜೆ ಹಾಕಿದ್ದಾರೆ. ಕೈಯಲ್ಲಿ ರೆಡ್ ಕಲರ್ ರೋಸ್ ಹಿಡಿದು ಸಪ್ತಸಾಗರದಾಚೆ ಸಿನಿಮಾ ಹಾಡಿಗೆ ಕುಣಿದಿದ್ದಾರೆ.
38ರ ಹರೆಯದಲ್ಲೂ ನಟಿ ರಾಧಿಕಾ 16 ಹುಡುಗಿಯಂತೆ ಕಾಣ್ತಾರೆ. ಅವರ ಸೌಂದರ್ಯಕ್ಕೆ ಪಡ್ಡೆ ಹುಡುಗರು ಕೂಡ ಫಿದಾ ಆಗಿದ್ದಾರೆ. ರಾಧಿಕಾ ಕುಮಾರಸ್ವಾಮಿ ಇದೀಗ ಇನ್ಸ್ಟಾದಲ್ಲಿ ನ್ಯೂ ರೀಲ್ಸ್ ಶೇರ್ ಮಾಡಿದ್ದಾರೆ. ಸಂತೋಷದ ಅಮೂಲ್ಯ ಕ್ಷಣಗಳು ಅಂತ ಟೈಟಲ್ ಕೊಟ್ಟು ವಿಡಿಯೋ ಶೇರ್ ಮಾಡಿದ್ದಾರೆ. ನಾವೇ ಕಂಡ ಕನಸು ಎನಲೇ ಅಂತ ರಾಧಿಕಾ ಕುಮಾರಸ್ವಾಮಿ ಹಾಡುತ್ತಾ ಕಡಲತೀರದಲ್ಲಿ ನಲಿದಾಡಿದ್ದಾರೆ. ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಸಮುದ್ರದ ದಡದಲ್ಲಿ ನೀರಿನ ಜೊತೆ ಆಟವಾಡ್ತಾ ಓಡಿ ಎಂಜಾಯ್ ಮಾಡಿದ್ರು.
ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸ್ವೀಟಿ ಡ್ಯಾನ್ಸ್ ನೋಡಿದ ಫ್ಯಾನ್ಸ್ ಏನ್ ಮೇಡಂ ಫುಲ್ ಹ್ಯಾಪಿನಾ ಎಂದು ಕಮೆಂಟ್ ಮಾಡ್ತಿದ್ದಾರೆ. ಯಾವಾಗಲೂ ನಿಮ್ಮ ಮುಖದಲ್ಲಿ ನಿಮ್ಮ ಜೀವನದಲ್ಲಿ ನಗು ಸದಾ ಇರಲಿ ನೀವು ನನ್ನ ಫೇವರೆಟ್ ಹೀರೋಯಿನ್ ಅಂತ ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ರಾಧಿಕಾ ಡ್ಯಾನ್ಸ್ ವಿಡಿಯೋಗೆ ಲೈಕ್ಗಳ ಸುರಿಮಳೆ ಆಗ್ತಿದೆ.