ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹುನಿರೀಕ್ಷಿತ ಚಿತ್ರ ಬಘೀರ ರಿಲೀಸ್ ಡೇಟ್ ಫಿಕ್ಸಾಗಿದೆ. ಅಕ್ಟೋಬರ್ 31ರಂದು ರೋರಿಂಗ್ನ ಅಖಾಡಕ್ಕೆ ಇಳಿಸೋದಕ್ಕೆ ಹೊಂಬಾಳೆ ಸಂಸ್ಥೆ ದಿವ್ಯ ಮುಹೂರ್ತ ನಿಗದಿ ಮಾಡಿದೆ. ಎಲ್ರೂ ದಸರಾ ಹಬ್ಬದ ಮೇಲೆ ಕಣ್ಣಿಟ್ಟರೆ ಬಘೀರ ಟೀಮ್ ದೀಪಾವಳಿ ಹಬ್ಬನ ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಈ ಬಾರಿ ರೋರಿಂಗ್ ದೀಪಾವಳಿ ಜೋರಾಗಿರಲಿದೆ. ಯಾಕಂದ್ರೆ, ಮದಗಜ ಆದ್ಮೇಲೆ ಬಿಗ್ಸ್ಕ್ರೀನ್ ಮೇಲೆ ಅಗಸ್ತ್ಯನ ದರ್ಶನ ಆಗಿಲ್ಲ. ಬರೋಬ್ಬರಿ ಮೂರು ವರ್ಷಗಳು ಕಳೆದ ಮೇಲೆ ರೋರಿಂಗ್ ಸ್ಟಾರ್ ಥಿಯೇಟರ್ಗೆ ಲಗ್ಗೆ ಇಡ್ತಿರೋದ್ರಿಂದ ಫ್ಯಾನ್ಸ್, ಸರಪಟಾಕಿ ಹಚ್ಚಿ ಸಂಭ್ರಮಿಸೋಕೆ, ಅಗಸ್ತ್ಯನ ಥಿಯೇಟರ್ಗೆ ಬರಮಾಡಿಕೊಳ್ಳೋಕೆ ಕಾತುರರಾಗಿದ್ದಾರೆ.
ಇನ್ನೂ ಬಘೀರ ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ʼಲಕ್ಕಿʼ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಕೆಜಿಎಫ್, ʼಕಾಂತಾರʼ , ಸಲಾರ್ನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್ ʼಬಘೀರʼ ಚಿತ್ರವನ್ನು ನಿರ್ಮಿಸಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಹೊಂಬಾಳೆ ಹಾಗೂ ಸೂರಿ..ಈ ಮೂವರ ಸಂಗಮದಿಂದಲೇ ಬಘೀರ ದೊಡ್ಡ ಮಟ್ಟಿಗಿನ ಹೈಪ್ ಪಡೆದುಕೊಂಡಿದೆ. ಎಜೆ ಶೆಟ್ಟಿ ಕ್ಯಾಮೆರಾ ಕೈಚಳಕ, ಅಜನೀಶ್ ಲೋಕನಾಥ್ ಸಂಗೀತ ಈ ಸಿನಿಮಾಗಿದೆ.
ಪ್ರಕಾಶ್ ರಾಜ್, ರಾಮಚಂದ್ರರಾಜು, ರಂಗಾಯಣ ರಘು, ಅಚ್ಯುತ್ ಕುಮಾರ್ ನಂತಹ ದಿಗ್ಗಜ ತಾರೆಯರ ಅಭಿನಯದ ಮೆರಗು ತುಂಬಿರುವ ಬಘೀರನಿಗೆ ರುಕ್ಮಿಣಿ ವಸಂತ ಜೋಡಿಯಾಗಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್ನಲ್ಲಿ ಬಘೀರ ತಯಾರಾಗಿದ್ದು, ಹಿಂದೆಂದೂ ಕಾಣದ ಲುಕ್ನಲ್ಲಿ ರೋರಿಂಗ್ ಅಬ್ಬರ-ಆರ್ಭಟ ನೋಡ್ಬೋದಂತೆ. “ಸಮಾಜವು ಕಾಡಾಗಿ ಬದಲಾದಾಗ ಒಬ್ಬ ಪರಭಕ್ಷಕ ಮಾತ್ರ ನ್ಯಾಯಕ್ಕಾಗಿ ಘರ್ಜಿಸುತ್ತಾನೆ” ಅನ್ನೋದನ್ನ ಬಘೀರ ಚಿತ್ರದಲ್ಲಿ ಹೇಳಲಾಗ್ತಿದೆಯಂತೆ. ಈಗಾಗಲೇ ನಯಾ ಲುಕ್ ಹಾಗೂ ಟೀಸರ್ನಿಂದ ಬಘೀರ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾನೆ. ಈ ದೀಪಾವಳಿ ಹಬ್ಬದಂದು ಸಿಲ್ವರ್ ಸ್ಕ್ರೀನ್ ಮೇಲೆ ಮುರುಳಿ ಮಿಂಚಿನ ಸಂಚಲನ ಮೂಡಿಸೋದು ಖಚಿತ, ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋದು ನಿಶ್ಚಿತ ಅಂತಿದ್ದಾರೆ ಅವರ ಅಭಿಮಾನಿಗಳು.