ಕಿರುತೆರೆ ನಟಿ ಕವಿತಾಗೌಡ ಹಾಗೂ ಚಂದನ್ ಕುಮಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕವಿತಾಗೌಡ ಅವರು ಗಂಡು ಮಗುಇಗೆ ಜನ್ಮ ನೀಡಿದ್ದು, ಚಂದನ್ ಕುಮಾರ್ ಅವರು ತಮ್ಮ ಅಭಿಮಾನಿಗಳೊಂದಿಗೆ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಚಂದನ್ ಇದೀಗ ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಅನ್ನೋ ಮೂಲಕ ಮಗನ ಮೊದಲ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ.