ದೇಶದೆಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಾಗೆಯೇ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಲಾಗಿದೆ. ಕ್ರಿಸ್ಮಸ್ ಟ್ರೀ ಕೂಡ ಸಖತ್ ಆಗಿ ಡೆಕೊರೇಟ್ ಮಾಡಿದ್ದು, ಮನೆಯಲ್ಲಿ ಕ್ರಿಸ್ಮಸ್ ಪ್ರಿಪ್ರೇಶನ್ ಕೂಡ ಇಂಟ್ರಸ್ಟಿಂಗ್ ಆಗಿದೆ. ಮಕ್ಕಳಿಬ್ಬರೂ ಈ ಕ್ಷಣವನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಇಬ್ಬರು ಮಕ್ಕಳ ಜೊತೆಗೆ ರಾಧಿಕಾ ಪಂಡಿತ್ ಮತ್ತು ಯಶ್ ಸಖತ್ ಎಂಜಾಯ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಕ್ರಿಸ್ಮಸ್ ಹಬ್ಬ ಸಡಗರ ಸಂಭ್ರಮದಿಂದ ಮಾಡಲಾಗಿದೆ. ಪ್ರತಿ ವರ್ಷ ಈ ಸಂಭ್ರಮದ ವಾತಾವರಣ ಕಾಣಿಸುತ್ತದೆ. ಮಗಳು ಐರಾ ಹಾಗೂ ಮಗ ಯಥರ್ವ್ ಅವರ ಈ ವರ್ಷದ ಹಬ್ಬ ಜೋರಾಗಿದೆ. ಕ್ರಿಸ್ಮಸ್ ಟ್ರೀ ಅನ್ನ ರೆಡಿ ಮಾಡಿದ್ದಾರೆ. ಮಕ್ಕಳ ಈ ಒಂದು ಸಂಭ್ರಮದಲ್ಲಿ ರಾಕಿ ಭಾಯ್ ಯಶ್ ಕೂಡ ಭಾಗಿ ಆಗಿದ್ದಾರೆ. ಮಕ್ಕಳು ಮತ್ತು ರಾಧಿಕಾ ಅವರ ಫೋಟೋಗಳನ್ನ ಇವರೇ ತೆಗೆದಿರೋ ಹಾಗೇನೂ ಇದೆ. ಹಾಗೇ ಕ್ರಿಸ್ಮಸ್ ಹಬ್ಬಕ್ಕೆ ಸಾಂತಾ ಕ್ಲಾತ್ ತರವೇ ರಾಧಿಕಾ, ಐರಾ ಮತ್ತು ಯಥರ್ವ ಡ್ರೆಸ್ ಕೂಡ ತೊಟ್ಟಿದ್ದಾರೆ. ಹೀಗೆ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿತ್ತು.
ಕ್ರಿಸ್ಮಸ್ ಆಚರಣೆ ಮಾಡಿರೋ ಪ್ರತಿ ಕ್ಷಣವನ್ನು ಕ್ಯಾಪ್ಚರ್ ಮಾಡಲಾಗಿದೆ. ವಿಡಿಯೋದಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಕ್ಯಾಪ್ಚರ್ ಆಗಿದೆ. ಕ್ರಿಸ್ಮಸ್ ಹಬ್ಬಕ್ಕೆ ಮಾಡಿಕೊಂಡ ವಿಶೇಷ ಮನೆಯ, ಕ್ರಿಸ್ಮಸ್ ಟ್ರೀ ಎದುರು ನಿಂತು ಕೊಟ್ಟ ಪೋಸ್ ಎಲ್ಲವೂ ಇಲ್ಲಿ ಕ್ಯಾಪ್ಚರ್ ಆಗಿವೆ. ಹಾಗೆ ಈ ಎಲ್ಲ ಫೋಟೋಗಳು ಮತ್ತು ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಈ ಫೋಟೋ ಮತ್ತು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ರಾಕಿ ಭಾಯ್ ಕ್ರಿಸ್ಮಸ್ ಹಬ್ಬದ ಫೋಟೋ ವೈರಲ್ ಆಗಿವೆ. ಮಕ್ಕಳ ಜೊತೆಗೆ ರಾಕಿ ಭಾಯ ತೆಗೆಸಿಕೊಂಡ ಫೋಟೋ ಶೇರ್ ಕೂಡ ಆಗಿವೆ. ಹಬ್ಬದ ದಿನವೇ ಈ ಎಲ್ಲ ಫೋಟೋಗಳು ಶೇರ್ ಆಗಿವೆ. ಯಶ್ ಮತ್ತು ರಾಧಿಕಾ ಫ್ಯಾನ್ಸ್ ಈ ಫೋಟೋಗಳನ್ನ ನೋಡಿದ್ದು, ವೇರಿ ನೈಸ್ ಅಂತಾ ಕಾಮೆಂಟ್ ಮಾಡಿದ್ದಾರೆ.