ಸ್ಯಾಂಡಲ್ವುಡ್ ನಟ ದರ್ಶನ್ ಅವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ನಟ ಡಿಸ್ಚಾರ್ಜ್ ಆಗುವಾಗ ಅವರೊಂದಿಗೆ ಅವರ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಹಾಗೂ ಸ್ನೇಹಿತ ಧನ್ವೀರ್, ಸಹೋದರ ದಿನಕರ್ ತೂಗುದೀಪ ಹಾಗೂ ಅವರ ಪತ್ನಿ ಇದ್ದರು. ನಟ ದರ್ಶನ್ ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಪತ್ನಿಯ ಫ್ಲಾಟ್ಗೆ ಹೋಗಿದ್ದರು.
ದರ್ಶನ್ ಪುತ್ರ ವಿನೀಶ್ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಅಪ್ಪ ಮಗನ ಹೆಗಲ ಮೇಲೆ ಕೈಇಟ್ಟು ನಡೆಯುವಂತಹ ಫೋಟೋವನ್ನು ಇನ್ಸ್ಟಾ ಸ್ಟೋರಿಯಾಗಿ ಹಾಕಿಕೊಂಡಿದ್ದಾರೆ. ಇದಕ್ಕೆ ಪಾಪಾ ಮೆರಿ ಜಾನ್ ಮ್ಯೂಸಿಕ್ ಕೂಡಾ ಹಾಕಿದ್ದಾರೆ. ಅನಿಮಲ್ ಸಿನಿಮಾದಲ್ಲಿ ತಂದೆ-ಮಗನ ಬಾಂಡಿಂಗ್ ತೋರಿಸಲಾದ ಪಾಪಾ ಮೇರಿ ಜಾನ್ ಹಾಡು ಸಖತ್ ಆಗಿದೆ. ಇದನ್ನು ಸೋನು ನಿಗಮ್, ಹರ್ಷವರ್ಧನ್ ರಾಮೇಶ್ವರ್, ರಾಜ್ ಶೇಖರ್ ಹಾಡಿದ್ದಾರೆ.
ವಿನೀಶ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಾಕಿದ್ದು ಆ ಫೋಟೋದಲ್ಲಿ ದರ್ಶನ್ ವಿನೀಶ್ ಹೆಗಲ ಮೇಲೆ ಕೈ ಹಾಕಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ವಿನೀಶ್ ತಂದೆಯನ್ನು ಬಳಸಿ ಹಿಡಿದುಕೊಂಡಿರುವುದನ್ನು ಕಾಣಬಹುದು.
ವಿನೀಶ್ ದರ್ಶನ್ ಅಪ್ಪ ಡಿಸ್ಚಾರ್ಜ್ ಆಗಿ ಬರುತ್ತಿದ್ದಂತೆ ಜೊತೆಗೆ ನಿಂತಿದ್ದಾರೆ. ನಟ ದರ್ಶನ್ ಕೂಡಾ ಪುತ್ರ ವಿನೀಶ್ ಹೆಗಲ ಮೇಲೆ ಕೈ ಇಟ್ಟುಕೊಂಡು ನಿಧಾನವಾಗಿ ಕಾರಿನ ಕಡೆ ಹೆಜ್ಜೆ ಹಾಕಿದ್ದಾರೆ. ಅವರ ತಂದೆಯನ್ನು ಹಿಡಿದುಕೊಂಡು ಕಾರಿನ ಕಡೆ ಹೆಜ್ಜೆ ಹಾಕಿದ್ದಾರೆ.