ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಡೆವಿಲ್ ಸಿನಿಮಾವನ್ನು ಮಿಲನ ಚಿತ್ರದ ಖ್ಯಾತಿಯ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸುತ್ತಿದ್ದು, ಡೆವಿಲ್ ಸಿನಿಮಾ ಶೂಟಿಂಗ್ ಶುರು ಆಗ್ತಿದೆ.
2024ರ ಫೆಬ್ರವರಿ 16ರಂದು ನಟ ದರ್ಶನ್ ಹುಟ್ಟುಹಬ್ಬ ಇದ್ದು, ಬರ್ತ್ಡೇ ಮುಗಿಸಿ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಲಿದ್ದಾರೆ. ಕಳೆದ ವರ್ಷದ ಬರ್ತ್ಡೇಯಲ್ಲಿ ಡೆವಿಲ್- ದಿ ಹೀರೋ ಚಿತ್ರದ ಫಸ್ಟ್ ಲುಕ್ ಟೀಸರ್ ಲಾಂಚ್ ಆಗಿತ್ತು. ಡೆವಿಲ್ ಸಿನಿಮಾ ಇದೇ ಡಿಸೆಂಬರ್ 20ಕ್ಕೆ ತೆರೆಗಪ್ಪಳಿಸಬೇಕಿತ್ತು. ಅಂದ್ರೆ ನಿನ್ನೆ ಬೆಳ್ಳಿಪರದೆ ಬೆಳಗಬೇಕಿತ್ತು. ಆದರೆ ಅಷ್ಟರಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡ ನಟ ದರ್ಶನ್, ಜೈಲು, ಕೋರ್ಟ್ ಅಂತ ಆ ಸಿನಿಮಾ ಅಷ್ಟಕ್ಕೇ ನಿಂತು ಹೋಯ್ತು. ಈಗಾಗ್ಲೇ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದ ಟೀಂಗೆ ದರ್ಶನ್ ಯಾವಾಗ ಹೊರಬರ್ತಾರೋ..? ಇಷ್ಟಕ್ಕೂ ಸಿನಿಮಾ ಕಂಪ್ಲೀಟ್ ಆಗುತ್ತೋ ಇಲ್ವೋ ಅನ್ನೋ ಅನುಮಾನಗಳಿತ್ತು. ಆದರೆ ಈಗ ಎಲ್ಲಕ್ಕೂ ತೆರೆಬಿದ್ದಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಬೇಲ್ ಸಿಕ್ಕಿದ್ದು, ಮೈಸೂರಿಗೂ ದಾಸ ಕಾಲಿಟ್ಟಾಯ್ತು. ಇದೇ 2025ರ ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬ ಇದೆ. ಅದಾದ ಬಳಿಕ ಫೆಬ್ರವರಿ 3ನೇ ವಾರದಿಂದ ಡೆವಿಲ್ ಚಿತ್ರದ ಶೂಟಿಂಗ್ ಮತ್ತೆ ಕಿಕ್ ಸ್ಟಾರ್ಟ್ ಆಗಲಿದೆ ಎನ್ನಲಾಗ್ತಿದೆ. ಕಾನೂನಿನ ತೊಡಕುಗಳನ್ನ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಮಿಲನ ಪ್ರಕಾಶ್ ಡೆವಿಲ್ ಚಿತ್ರದ ಶೂಟಿಂಗ್ ಮತ್ತೆ ಶುರು ಮಾಡೋಕೆ ಮುಂದಾಗ್ತಿದ್ದಾರೆ. ಇನ್ನು ತಾಯಿ ಆಶೀರ್ವಾದ ಪಡೆದ ದರ್ಶನ್ ನ್ಯೂ ಚಾಪ್ಟರ್ ಶುರು ಮಾಡಲಿದ್ದಾರೆ. ಸದ್ಯಕ್ಕೆ ದರ್ಶನ್ ಫಾರಂ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.