ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ಗೆ ಜೈಲು ನರಕವಾಗಿ ಪರಿಣಮಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಂಭದ ದಿನಗಳನ್ನು ಆರಾಮವಾಗಿ ಕಳೆದಿದ್ದ ದರ್ಶನ್ಗೆ ಈಗ ಜೈಲು ವಾಸದ ನರಕಯಾತನೆ ನಿಜಕ್ಕೂ ಅರಿವಿಗೆ ಬರುತ್ತಿರುವಂತಿದೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮೂಲಗಳ ಪ್ರಕಾರ, ದರ್ಶನ್ಗೆ ಕೂರುವುದು-ಏಳುವುದು ಮಹಾ ಸಮಸ್ಯೆಯಾಗಿ ಪರಿಣಮಿಸಿದೆ.
ಇದನ್ನು ಓದಿ : ಸ್ತ್ರೀ 3 ಬಗ್ಗೆ ಸುಳಿವು ಕೊಟ್ಟ ನಟಿ ಶ್ರದ್ಧಾ ಕಪೂರ್!
ಈ ದೃಶ್ಯ ನೋಡಿದ್ರೆ ದರ್ಶನ್ ಅಭಿಮಾನಿಗಳು ಹಾಗೂ ಆಪ್ತರಿಗೆ ಬೇಸರವಾಗಬಹುದು. ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ 80 ಮೀಟರ್ ನಡೆಯೋದಕ್ಕೂ ದರ್ಶನ್ ನರಳಾಡುತ್ತಿದ್ದಾನೆ. ಬೆನ್ನು ಮುಟ್ಟಿ ನೋವು ಕಡಿಮೆ ಮಾಡಲು ದರ್ಶನ್ ಪ್ರಯತ್ನ ಪಡುತ್ತಿದ್ದಾನೆ. ನಡೆಯುವಾಗಲೇ ನೋವಿನಿಂದ ಬ್ಯಾಲೆನ್ಸ್ ತಪ್ಪಿ ಬೀಳುವ ಹಂತಕ್ಕೆ ಹೋಗಿದ್ದ ದರ್ಶನ್. ನಡೆಯುವಾಗ ಬಗ್ಗಿ, ಎದ್ದು ಬೆನ್ನು ನೋವು ಸರಿ ಮಾಡಿಕೊಳ್ಳಲು ದರ್ಶನ್ ಹರಸಾಹಸ ಪಡುತ್ತಿದ್ದಾನೆ. ನಿನ್ನೆ ಸಂಜೆ ದರ್ಶನ್ ಪರ ವಕೀಲರಾದ ರಾಮ್ ಸಿಂಗ್ ಬಳ್ಳಾರಿ ಜೈಲಿಗೆ ಬಂದಾಗ ದರ್ಶನ್ ಸ್ಥಿತಿ ಹೀಗಿತ್ತು. ವಕೀಲರನ್ನ ಮೀಟ್ ಮಾಡಲು ಸಂದರ್ಶಕರ ಕೊಠಡಿಗೆ ಬಂದು ಹೋಗುವಾಗ ದರ್ಶನ್ ನರಳಾಡಿದ್ದಾನೆ.