ಚಿತ್ರರಂಗದಲ್ಲಿ ಡಿವೋರ್ಸ್ ವದಂತಿಗಳು ವೈರಲ್ ಆಗುತ್ತಿರುವುದು ಹೊಸತೇನಲ್ಲ. ಈ ಮುಂಚೆ ಕಾಮಿಡಿ ಕಿಲಾಡಿ ಕಲಾವಿದರಾದ ಜಗ್ಗಪ್ಪ-ಸುಶ್ಮಿತಾ ದಂಪತಿಯ ಡಿವೋರ್ಸ್ ಬಗ್ಗೆ ಸಖತ್ ಸುದ್ದಿಯಾಗಿತ್ತು. ಆದರೆ ಇದೆಲ್ಲ ಸುಳ್ಳು ಎಂದು ಜೋಡಿ ಬಳಿಕ ಸ್ಪಷ್ಟನೆ ನೀಡಿತ್ತು. ಇದೀಗ ಮಾಸ್ಟರ್ ಆನಂದ ದಂಪತಿ ಬಗ್ಗೆ ಕೆಲವು ದಿನಗಳಿಂದ ಹೊಸ ಸುದ್ದಿಯೊಂದು ವೈರಲ್ ಆಗ್ತಿದೆ.
ಯಶಸ್ವಿನಿ ಆನಂದ್ ಇತ್ತೀಚೆಗೆ ಫುಲ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ರೀಲ್ಸ್ ಶೇರ್ ಮಾಡಿದ್ದಾರೆ. ಯಶಸ್ವಿನಿ ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಆದರೆ ಅದರಲ್ಲಿ ಒಬ್ಬರು ಇನ್ನೊಂದು ಡಿವೋರ್ಸ್ ಶೀಘ್ರದಲ್ಲಿಯೇ ಆಗಲಿದೆ’ ಎಂಬರ್ಥದಲ್ಲಿ ಕಮೆಂಟ್ ಮಾಡಿದ್ದಾರೆ. ಆದರೆ ಅದಕ್ಕೆ ಅಲ್ಲಿಯೇ ಯಶಸ್ವಿನಿ ಕೂಡ ಉತ್ತರ ಕೊಟ್ಟಿದ್ದು, ‘ಮೇಡಂ ಅದು ಎಂದಿಗೂ ಸಾಧ್ಯವಿಲ್ಲ ಮೇಡಂ. ನಾನು ನನ್ನ ಮಕ್ಕಳಿಗಿಂತ ನನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತೇನೆ’ ಎಂದು ಹಾಕಿದ್ದಾರೆ.
ಸಖತ್ ಆಗೇ ಗರಂ ಆಗಿ ಉತ್ತರ ನೀಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಯಶಸ್ವಿನಿ ಮಿನಿ ಸ್ಕರ್ಟ್ ಹಾಕಿಕೊಂಡ ಪರಿಣಾಮ ಸಖತ್ಟ್ರೋಲ್ ಕೂಡ ಆಗಿದ್ದಾರೆ. ಇದಕ್ಕೂ ಮುಂಚೆ ಯಶಸ್ವಿನಿ ಅವರು ಆನಂದ್ ಜತೆಗೆ ಕರಿಮಣಿ ಮಾಲೀಕ ಸಾಂಗ್ ಸಖತ್ ಸ್ಟೆಪ್ಸ್ ಹಾಕಿದ್ದರು.