ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ಟಾಕ್ಸಿಕ್ ತಂಡ ಮೊದಲೇ ಘೋಷಣೆ ಮಾಡಿತ್ತು. ಅದರಂತೆ ನಿನ್ನೆ ಟಾಕ್ಸಿಕ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, ಅದೀಗ 24 ಗಂಟೆಯಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಸಿನಿಮಾದ ಗ್ಲಿಂಪ್ಸ್ ಅನ್ನೋದ್ರಲ್ಲಿ ಟಾಲಿವುಡ್ ನ ಅಲ್ಲು ಅರ್ಜುನ್ ಹಾಗೂ ಜೂನಿಯರ್ ಎನ್ ಟಿ ಆರ್ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿದೆ.
ನಾ ಬರೋವರೆಗೂ ಮಾತ್ರ ಬೇರೆಯವ್ರ ಹವಾ.. ನಾ ಬಂದ್ಮೇಲೆ ನಂದೇ ಹವಾ. ಇದು ರಾಕಿಂಗ್ ಸ್ಟಾರ್ ಯಶ್ ಚಿತ್ರದ ಡೈಲಾಗ್ ಸರಿ. ಆದ್ರೆ ಅದನ್ನ ನಿಜ ಜೀವನದಲ್ಲೂ ನಿಜವಾಗಿಸಿದ ಸೆಲ್ಫ್ ಮೇಡ್ ಶಹಜಾದಾ ಈ ಯಶ್. ಹೌದು.. ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಆಯಾಮ ಕೊಟ್ಟು, ಚರಿತ್ರೆ ಸೃಷ್ಠಿಸಿದ ರಾಕಿಭಾಯ್, ಇದೀಗ ಟಾಕ್ಸಿಕ್ ಚಿತ್ರದಿಂದಲೂ ಸಹ ಒಂದಷ್ಟು ಹೊಸ ದಾಖಲೆಗಳನ್ನ ಬರೆಯಲು ಮುಂದಾಗಿದ್ದಾರೆ. ನಿನ್ನೆಯಷ್ಟೇ ಯಶ್ ಬರ್ತ್ ಡೇ ವಿಶೇಷ ಟಾಕ್ಸಿಕ್ ಪೀಕ್ ಅನ್ನೋ ಸಣ್ಣದೊಂದು ಟೀಸರ್ ಝಲಕ್ ರಿವೀಲ್ ಆಗಿತ್ತು. ಅದೀಗ 24 ಗಂಟೆಯಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಸಿನಿಮಾದ ಗ್ಲಿಂಪ್ಸ್ ಅನ್ನೋದ್ರಲ್ಲಿ ಟಾಲಿವುಡ್ ನ ಅಲ್ಲು ಅರ್ಜುನ್ ಹಾಗೂ ಜೂನಿಯರ್ ಎನ್ ಟಿ ಆರ್ ಸಿನಿಮಾಗಳ ದಾಖಲೆಗಳನ್ನ ಸರಿಗಟ್ಟಿದೆ.
ರೆಕಾರ್ಡ್ಸ್ ಇರೋದೇ ಬ್ರೇಕ್ ಮಾಡೋಕೆ ಅನ್ನೋ ಯಶ್ ಮಾತು ಇಲ್ಲಿ ಮತ್ತೊಮ್ಮೆ ನಿಜವಾಗ್ತಿದೆ. ಯಾವ ರೆಕಾರ್ಡ್ ಕೂಡ ಯಾವ ಸ್ಟಾರ್ ಗೂ ಪರ್ಮನೆಂಟ್ ಅಲ್ಲ. ಹಾಗಾಗಿಯೇ ಪುಷ್ಪ-2 ಹಿಂದಿ ಚಿತ್ರದ 27.67 ಮಿಲಿಯನ್ ಹಾಗೂ ದೇವರ ಸಿನಿಮಾದ 26.17 ಮಿಲಿಯನ್ ವೀವ್ಸ್ ಗಿಂತ ಟಾಕ್ಸಿಕ್ ಚಿತ್ರದ ಪೀಕ್ 28 ಮಿಲಿಯನ್ ವೀವ್ಸ್ ಮೂಲಕ ಉಡೀಸ್ ಮಾಡಿದೆ. ಇದು ನಿಜಕ್ಕೂ ದೇಶಾದ್ಯಂತ ಹಾಗೂ ಪ್ರಪಂಚದ ಮೂಲೆ ಮೂಲೆಗಳಲ್ಲಿ ನಮ್ಮ ರಾಕಿಭಾಯ್ ಯಶ್ ಗಿರೋ ಫ್ಯಾನ್ ಫಾಲೋಯಿಂಗ್ ನ ಪ್ರತೀಕವಾಗಿದೆ. ಟಾಕ್ಸಿಕ್ ಚಿತ್ರದ ಮೇಕಿಂಗ್ ಗತ್ತು ಹಾಗೂ ಗಮ್ಮತ್ತಿನ ಕೈಗನ್ನಡಿ ಅನಿಸಿದೆ. ಇದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ವಿಷಯ. ಇನ್ನೂ ಆರಂಭದಲ್ಲೇ ಈ ಪಾಟಿ ದಾಖಲೆ ಬರೀತಿರೋ ಟಾಕ್ಸಿಕ್, ರಿಲೀಸ್ ವೇಳೆಗೆ ಹಾಗೂ ರಿಲೀಸ್ ಬಳಿಕ ಏನೆಲ್ಲಾ ಹಂಗಾಮ ಮಾಡಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್