- ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್
- ಜಗದೀಶ್ ವಾರ್ಡ್ ರೋಬ್ನಲ್ಲಿ ಡೆತ್ನೋಟ್
- ಜಗದೀಶ್ ಸಾವಿಗೆ ಅವರ ಬಿಸ್ನೆಸ್ ಪಾರ್ಟ್ನರ್ ಸುರೇಶ್ ಹೊಂಬಣ್ಣನೇ ಕಾರಣ
ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜಗದೀಶ್ ಅವರ ವಾರ್ಡ್ ರೋಬ್ ನಲ್ಲಿ ಡೆತ್ ನೋಟ್ ಸಿಕ್ಕಿದೆ.
ಈ ಬಗ್ಗೆ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖ ಮಾತನಾಡಿದ್ದಾರೆ. ಒಂದು ವಾರದ ಹಿಂದೆ ನಮ್ ತಾಯಿ ತೀರಿಕೊಂಡಿದ್ರು. ಆದಾದ ಮೇಲೆ ಪತಿ ಹೀಗೆ ಮಾಡ್ಕೊಂಡಿದ್ದು, ಶಾಕ್ ಆಗಿದೆ. ಇದೇ 29ನೇ ತಾರೀಖು ಶ್ರೀರಂಗ ಪಟ್ಟಣದಲ್ಲಿ ಅವ್ರ ಪೂಜೆ ಇದೆ ಅವ್ರ ಹಳೆ ಬಟ್ಟೆ ತಗೊಳ್ಳೋಣ ಅಂತ ವಾರ್ಡ್ ರೋಬ್ ತೆಗೆದೆ ಆ ಟೈಂನಲ್ಲಿ ಡೆತ್ ನೋಟ್ ಸಿಕ್ಕಿದೆ ಅಂತ ಹೇಳಿದ್ದಾರೆ.
ಇನ್ನು ಸೌಂದರ್ಯ ಜಗದೀಶ್ ಸಾವಿಗೆ ಅವರ ಬಿಸ್ನೆಸ್ ಪಾರ್ಟ್ನರ್ ಸುರೇಶ್ ಹೊಂಬಣ್ಣನೇ ಕಾರಣ. ಕೊನೆ ಕಾಲ್, ಕೊನೆ ಮೆಸೇಜ್ ಸುರೇಶ್ ದೆ ಬಂದಿದ್ದು, ತುಂಬಾ ಟಾರ್ಚರ್ ಕೊಟ್ಟಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಈಗಾಗಲೇ ಶಶಿರೇಖಾ ಕಂಪ್ಲೇಂಟ್ ಕೊಟ್ಟಿದ್ದು, ಕಾನೂನು ರೀತಿ ಹೋರಾಟಕ್ಕೆ ಮುಂದಾಗಿದ್ದಾರೆ.