ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿ ತಮ್ಮ ಮುದ್ದಾದ ಗಂಡು ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ವಿಶೇಷ ಎಂದರೆ ನವರಾತ್ರಿ ಕೊನೆಯ ದಿನವೇ ಮುದ್ದಾದ ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ. ಸ್ವತಃ ಕವಿತಾ ಗೌಡ ಅವರೇ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಒಂದೇ ಗಂಟೆಗೆ ಸಾವಿರಾರು ಲೈಕ್ಸ್ನ ಈ ಫೋಟೋ ಪಡೆದುಕೊಂಡಿದೆ.ಈ ಮಗುವಿನ ಮುಖವನ್ನು ರಿವೀಲ್ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದರು. ಈ ಕೋರಿಕೆಯನ್ನು ಅವರು ಈಡೇರಿಸಿದ್ದಾರೆ.
ಕವಿತಾ ಗೌಡ ಅವರು ಕನ್ನಡ ಕಿರುತೆರೆ ನಟಿ. ಚಂದನ್ ಕುಮಾರ್ ಅವರು ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿದ ನಟ. ಕವಿತಾ ಗೌಡ ಹಾಗೂ ಚಂದನ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ತದನಂತರ ಲಾಕ್ಡೌನ್ ಸಮಯದಲ್ಲಿ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸ್ಟಾರ್ ದಂಪತಿ ಮೊದಲ ಮಗುವಿನ ಜೊತೆ ಕಾಲ ಕಳೆಯುತ್ತಿದ್ದಾರೆ.
ಸೆಪ್ಟೆಂಬರ್ 18ರಂದು ದಂಪತಿ ಮುದ್ದಾದ ಮಗುವಿಗೆ ವೆಲ್ಕಮ್ ಹೇಳಿದ್ದರು. ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಮುದ್ದಾದ ಮಗನ ಮುಖವನ್ನು ದಂಪತಿ ರಿವೀಲ್ ಮಾಡಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಮುದ್ದಾದ ಚಂದು ಹಾಗೂ ಕವಿತಾ ಗೌಡ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.