ಲಾಪತಾ ಲೇಡಿಸ್.. ಇದೇ ವರ್ಷ ಮಾರ್ಚ್ 1ರಂದು ತೆರೆಕಂಡ ಹಿಂದಿ ಸಿನಿಮಾ. ಇದೀಗ 2025ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿ ಪಡೆದಿರೋ ಸಿನಿಮಾ ಅನಿಸಿಕೊಂಡಿದೆ. 97ನೇ ಆಸ್ಕರ್ ಪ್ರಶಸ್ತಿಗಾಗಿ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿರೋ ಈ ಸಿನಿಮಾ, ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. 2001ರ ಕಾಲಘಟ್ಟದ ಕಥೆಯನ್ನ ಒಳಗೊಂಡಿರೋ ಲಾಪತಾ ಲೇಡಿಸ್ ಸಿನಿಮಾ, ಹೊಸದಾಗಿ ಮದ್ವೆಯಾದ ವಧುವೊಬ್ಬಳು, ಟ್ರೈನ್ನಲ್ಲಿ ಪಯಣಿಸುವಾಗ, ಬೇರೆ ಸ್ಟೇಷನ್ನಲ್ಲಿ ಇಳಿಯೋ ಕಾರಣ, ಗಂಡನಿಂದ ಕೈತಪ್ಪಿ ಹೋಗುವ ರೋಚಕತೆ ಹೊಂದಿದೆ. ಮೊಬೈಲ್ ಫೋನ್ಗಳು ದುಬಾರಿ ಆಗಿದ್ದಾಗಿನ ನೈಜ ಘಟನೆಗಳನ್ನ ಇಟ್ಟುಕೊಂಡು ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ.
ಇದೀಗ ಈ ಸಿನಿಮಾ ವಿಶ್ವ ಸಿನಿದುನಿಯಾದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಚಿತ್ರದ ಟೈಟಲ್ನ ‘ಲಾಸ್ಟ್ ಲೇಡಿಸ್’ ಅಂತ ಬದಲಿಸಿದೆ ಚಿತ್ರತಂಡ. 2025ರ ಮಾರ್ಚ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈಗಾಗ್ಲೇ ಭರ್ಜರಿ ಕ್ಯಾಂಪೇನ್ ಕೂಡ ನಡೆಸುತ್ತಿದೆ ಚಿತ್ರತಂಡ. ಅಂದಹಾಗೆ ಇದು ಆಸ್ಕರ್ ರೇಸ್ನಲ್ಲಿದ್ದ ಭಾರತದ ಬರೋಬ್ಬರಿ 22 ಖ್ಯಾತ ಸಿನಿಮಾಗಳನ್ನ ಹಿಂದಿಕ್ಕಿದೆ. ಹೌದು.. 12 ಹಿಂದಿ, 6 ತಮಿಳು ಹಾಗೂ 4 ಮಲಯಾಳಂ ಚಿತ್ರಗಳ ಮುಂದೆ ಆಸ್ಕರ್ ಮಂದಿಗೆ ಸ್ಪೆಷಲ್ ಅನಿಸಿದೆ. ಅನಿಮಲ್, ಚಂದು ಚಾಂಪಿಯನ್, ಕಲ್ಕಿ, ಹನುಮ್ಯಾನ್, ತಂಗಲಾನ್, ಆರ್ಟಿಕಲ್ 370, ಆಡುಜೀವಿತಂ, ಸ್ಯಾಮ್ ಬಹದ್ದೂರ್, ಶ್ರೀಕಾಂತ್ ಹೀಗೆ ಘಟಾನುಘಟಿ ಸ್ಟಾರ್ಗಳು ಹಾಗೂ ಟೆಕ್ನಿಷಿಯನ್ಸ್ ಸಿನಿಮಾಗಳು ಲಾಪತಾ ಲೇಡಿಸ್ ಮುಂದೆ ಡಲ್ ಹೊಡೆದಿವೆ.
ಅಂದಹಾಗೆ ಲಾಪತಾ ಲೇಡಿಸ್ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್ ನಮ್ಮ ಕನ್ನಡತಿ. ಯೆಸ್.. ಬೆಂಗಳೂರಿನ ಮಲ್ಲೇಶ್ವರಂ ಮೂಲದ ಕಿರಣ್ ರಾವ್ ಈ ಚಿತ್ರದ ನಿರ್ದೇಶಕಿ ಅನ್ನೋದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡುವ ವಿಷಯ.
ಇಂದಿಗೂ ಕಿರಣ್ ರಾವ್ ತಂದೆ-ತಾಯಿ ನಮ್ಮ ಮಲ್ಲೇಶ್ವರಂನಲ್ಲೇ ವಾಸಿಸುತ್ತಿದ್ದಾರೆ ಅನ್ನೋದು ಇಂಟರೆಸ್ಟಿಂಗ್. ಇದಕ್ಕಿಂತ ಮಿಗಿಲಾಗಿ ಕಿರಣ್ ರಾವ್, ನಮ್ಮ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಮೀರ್ ಖಾನ್ರ ಮಾಜಿ ಪತ್ನಿ.
ಆಮೀರ್ ಖಾನ್ ಜೊತೆಗೂಡಿ ಕಿರಣ್ ರಾವ್ ನಿರ್ಮಾಣ ಮಾಡಿ, ನಿರ್ದೇಶಿಸಿರೋ ಈ ಸಿನಿಮಾ ವೀಕ್ಷಕರು ಮತ್ತು ವಿಮರ್ಶಕರ ಮನಸ್ಸು ಗೆದ್ದಿತ್ತು. ಪ್ರತಿಭಾ ರಂತಾ, ನಿತಾಂಶಿ ಗೋಯೆಲ್, ಸ್ಪರ್ಶ್ ಶ್ರೀವಾಸ್ತವ್, ರವಿ ಕಿಶನ್ ಮುಖ್ಯಭೂಮಿಕೆಯಲ್ಲಿರೋ ಈ ಸಿನಿಮಾ ಕಳೆದ ವರ್ಷ ರಾಜಮೌಳಿಯ RRR ಸಿನಿಮಾ ರೀತಿ ಆಸ್ಕರ್ ಗೆದ್ದು ಬರಲಿ.
ಒಟ್ಟಾರೆ ಕನ್ನಡ ಮಲ್ಲೇಶ್ವರಂ ಮಹಿಳೆಯ ಈ ಸಾಧನೆಗೆ ಇಡೀ ಭಾರತವೇ ಹೆಮ್ಮೆ ಪಡುವಂತಾಗಿದೆ. ಕನ್ನಡಿಗರಿಂದಲೂ ಕಿರಣ್ ರಾವ್ಗೆ ಶಹಬ್ಬಾಶ್ಗಿರಿ ಸಿಗ್ತಿದೆ.