ಸೆಪ್ಟೆಂಬರ್ 2ಕ್ಕೆ ಕಿಚ್ಚ ಸುದೀಪ್ ಬರ್ತ್ ಡೇ ದಿನ, ರಿಲೀಸ್ ಗೆ ರೆಡಿಯಾಗಿರೋ ಮ್ಯಾಕ್ಸ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗುತ್ತೆ ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ. ಆದ್ರೆ ರಿಲೀಸ್ ಡೇಟ್ ನ ಜೊತೆಗೆ ಮ್ಯಾಕ್ಸ್ ಸಿನಿಮಾದ ಮಾಸ್ ಸಾಂಗ್ ಒಂದನ್ನ ರಿಲೀಸ್ ಮಾಡೋ ಪ್ಲಾನ್ ಮಾಡಿಕೊಂಡಿದೆ ಮ್ಯಾಕ್ಸ್ ಸಿನಿಮಾ ಟೀಮ್.
ಮ್ಯಾಕ್ಸ್ ಸಿನಿಮಾದ ಮಾಸ್ ಸಾಂಗ್ ಕಿಚ್ಚನ ಬರ್ತ್ ಡೇ ದಿನ ಬೆಳಗ್ಗೆ 6.56ಕ್ಕೆ ರಿಲೀಸ್ ಆಗಲಿದೆ. ಸುದೀಪ್ ಹುಟ್ಟು ಹಬ್ಬಕ್ಕೆ ರಿಲೀಸ್ ಆಗ್ತಿರೋ ಮಾಸ್ ಸಾಂಗ್ ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಸುತ್ತವೆ ಅಂತಿದೆ ಸಿನಿಮಾ ಟೀಮ್.
ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿರೋ ಹಾಡು ಮ್ಯಾಕ್ಸ್ ಬರ್ತ್ ಡೇ ಗಿಫ್ಟ್ ಆಗಿ ಫ್ಯಾನ್ಸ್ ಗೆ ಸಿಗಲಿದೆ. ವಿಜಯ್ ಕಾರ್ತಿಕೆಯ ನಿರ್ದೇಶನದ ಸಿನಿಮಾ ಸೆ. 27ಕ್ಕೆ ತೆರೆಗೆ ಬರುವ ಸಾಧ್ಯತೆ ಇದ್ದು. ಸಿನಿಮಾ ಟೀಮ್ ಅಧಿಕೃತವಾಗಿ ಡೇಟ್ ಅನೌನ್ಸ್ ಮಾಡ್ಬೇಕಿದೆ.