2024 ಮುಗೀತಿದೆ.. 2025ನ ವೆಲ್ಕಮ್ ಮಾಡೋಕೆ ತುದಿಗಾಲಲ್ಲಿ ನಿಂತಿದ್ದೀವಿ. ಕಳೆದ ವರ್ಷ ಸ್ಯಾಂಡಲ್ ವುಡ್ ಅಂಗಳದಲ್ಲಿ ಬರೋಬ್ಬರಿ 210 ಸಿನಿಮಾಗಳು ತೆರೆಕಂಡಿವೆ. ಆ ಪೈಕಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ ಚಿತ್ರಗಳು ಮಾತ್ರ ಎಂಟರಿಂದ ಹತ್ತು ಸಿನಿಮಾಗಳಷ್ಟೇ. ಆದ್ರೆ 2025 ಆ ರೀತಿ ಆಗಬಾರದು. ಆಗೋದೂ ಇಲ್ಲ ಅನ್ನೋ ಭರವಸೆ ನೀಡ್ತಿದ್ದಾರೆ ಬಿಗ್ ಸ್ಟಾರ್ಸ್ & ಅವ್ರ ಬಿಗ್ ಮೂವೀಸ್. ಹಾಗಾದ್ರೆ 2025ರ ಬಹು ನಿರೀಕ್ಷಿತ ಚಿತ್ರಗಳು ಯಾವ್ಯಾವು..? ಯಾವ ಸ್ಟಾರ್ ಗಳ ಫ್ಯಾನ್ಸ್ ಗೆ ಗುಡ್ ನ್ಯೂಸ್ ಯಾರ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
2025ರ ಬಹು ನಿರೀಕ್ಷಿತ ಚಿತ್ರಗಳು ಯಾವ್ಯಾವು..?
ಏಪ್ರಿಲ್ 10ಕ್ಕೆ ರಾಕಿಭಾಯ್ ‘ಟಾಕ್ಸಿಕ್’ ಕಿಕ್
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಳಿಕ ನಟ ಯಶ್ ಅವರನ್ನ ಬೆಳ್ಳಿತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅವರ ಟಾಕ್ಸಿಕ್ ಚಿತ್ರ ಬಿಡುಗಡೆಗಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಟಾಕ್ಸಿಕ್ ಸಿನಿಮಾವು ಯಶ್ ಅವರ 19ನೇ ಪ್ರೊಜೆಕ್ಟ್ ಆಗಿದೆ. 2024ರ ಆಗಸ್ಟ್ 8ರಿಂದ ಸಿನಿಮಾ ನಿರ್ಮಾಣ ಶುರುವಾಗಿದೆ. ಕೆವಿನ್ ಪ್ರೊಡಕ್ಷನ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ಗಳ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ನಿರ್ಮಾಪಕರಾದ ಕೆ.ನಾರಾಯಣ ಅವರೊಂದಿಗೆ ಯಶ್ ಕೂಡ ಈ ಸಿನಿಮಾದ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಟಾಕ್ಸಿಕ್ ಸಿನಿಮಾವನ್ನ ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಗೋವಾದ ಡ್ರಗ್ಸ್ ಜಾಲದ ಕಥೆಯನ್ನ ಒಳಗೊಂಡ ಸಿನಿಮಾ ಇದಾಗಿದೆ. ಇದರಲ್ಲಿ 1950-1970ರ ಅವಧಿಯ ಕಥೆಯನ್ನ ಹೇಳಲಾಗಿದೆ. ಸದ್ಯ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದೆ. ನಟ ಯಶ್ ಮತ್ತು ಇತರ ಕಲಾವಿದರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಹೊರದೇಶಗಳಲ್ಲೂ ಚಿತ್ರೀಕರಣ ನಡೆಯಲಿದೆ.. ಅಂದಹಾಗೇ, ನೀವು ಯಶ್ ಅವರ ಟಾಕ್ಸಿಕ್ ಸಿನಿಮಾ ನೋಡಲು ಇನ್ನೂ ಕಾಯಲೇಬೇಕು.
ಅಕ್ಟೋಬರ್ 2ಕ್ಕೆ ಶೆಟ್ರ ‘ಕಾಂತಾರ-1’
ಸ್ಯಾಂಡಲ್ವುಡ್ನ ನಟ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದ ‘ಕಾಂತಾರ’ ಸಿನಿಮಾ ದೇಶಾದ್ಯಂತ ಸೂಪರ್ ಹಿಟ್ ಆಗಿತ್ತು. ಕಾಂತಾರ ಯಶಸ್ಸಿನಿಂದ ಪ್ರೀಕ್ವೆಲ್ ಘೋಷಿಸಲಾಗಿತ್ತು. ಅದಕ್ಕೆ ‘ಕಾಂತಾರ: ಚಾಪ್ಟರ್ 1’ ಎಂದು ಶೀರ್ಷಿಕೆ ಇಡಲಾಗಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ. ರಿಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾ ಮೂಲಕ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. 2025ರ ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ ರಿಲೀಸ್ ಆಗಲಿದೆ.
ಮಾರ್ಚ್ ಎಂಡ್ ಗೆ ಧ್ರುವ ‘KD’ ಕಮಾಲ್..!
‘ಜೋಗಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿರುವ ಪ್ಯಾನ್ ಇಂಡಿಯಾ ‘ಕೆಡಿ’ ಸಿನಿಮಾದಲ್ಲಿ ನಟ ಧ್ರುವ ಸರ್ಜಾ 80ರ ದಶಕದ ಯುವಕ ಕಾಳಿದಾಸನಾಗಿ ಕಾಣಿಸಿಕೊಂಡಿದ್ದಾರೆ. ನಟಿ ರೀಶ್ಮಾ ನಾಣಯ್ಯ ಅವರಿಗೆ ನಾಯಕಿಯಾಗಿದ್ದು, ಬಾಲಿವುಡ್ ನಟ ಸಂಜಯ್ ದತ್ ಅವರು ಧಕ್ ದೇವ ಪಾತ್ರದಲ್ಲಿ ಮಿಂಚಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಕೂಡ ಇದರಲ್ಲಿ ಪ್ರಮುಖ ಪಾತ್ರದಲ್ಲಿದ್ದು, ಕನ್ನಡದ ಹಿರಿಯ ನಟರಾದ ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.
2025ರಲ್ಲೇ ಡಿಬಾಸ್ ‘ಡೆವಿಲ್’ ದರ್ಶನ ಫಿಕ್ಸ್
ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ನಟನ ಸಿನಿಮಾ ಮೂಡಿ ಬರಲಿ ಎಂದುಕೊಳ್ಳುವ ಅಪಾರ ಸಂಖ್ಯೆಯ ಅಭಿಮಾನಿಗಳು, ಮುಂದಿನ ಚಿತ್ರಗಳ ಅಪ್ಡೇಟ್ಸ್ಗಾಗಿ ಕಾತರರಾಗಿರುತ್ತಾರೆ. ಡಿ ಬಾಸ್ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’. ಈ ಸಿನಿಮಾ ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಅಭಿಮಾನಿಗಳು ಬಹಳ ಉತ್ಸುಕರಾಗಿದ್ದರು. ’ಡೆವಿಲ್’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, 2025 ಕ್ಕೆ ಬಿಡುಗಡೆಯಾಗಲಿದೆ. ಪ್ರಕಾಶ್ ವೀರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೆ ಜಯಮ್ಮ ನಿರ್ಮಾಣದ ಈ ಚಿತ್ರದಲ್ಲಿ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಡೆವಿಲ್ಗಿದೆ.
ಶಿವಣ್ಣ- ಉಪ್ಪಿ- ರಾಜ್ ಕಾಂಬೋ 45 ಆನ್ ದಿ ವೇ
ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ’45’ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರ ಈ ವರ್ಷದ ಅಂತ್ಯಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆ, ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಫ್ಯಾಷನೇಟ್ ಪ್ರೊಡ್ಯೂಸರ್ ಎಂಬ ಖ್ಯಾತಿಗೆ ಪಾತ್ರರಾದವರು ನಿರ್ಮಾಪಕ ರಮೇಶ್ ರೆಡ್ಡಿ. ಸದ್ಯ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ಜೊತೆ ನಿರ್ಮಾಪಕ ರೆಡ್ಡಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರಕ್ಕೆ ’45’ ಎಂಬ ವಿಭಿನ್ನ ಟೈಟಲ್ ಇಡಲಾಗಿದೆ. ನಟರಾದ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ’45’ ಚಿತ್ರದ ನಾಯಕಿಯಾಗಿ ಕೌಸ್ತುಭ ಮಣಿ ಅಭಿನಯಿಸುತ್ತಿದ್ದಾರೆ.
ಗಣೇಶ್- ರಮೇಶ್ ಯುವರ್ ಸಿನ್ಸಿಯರ್ಲಿ ರಾಮ್
‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಬಳಿಕ ನಟ ಗಣೇಶ್ ಅಭಿನಯಿಸಲಿರುವ ಮುಂದಿನ ಸಿನಿಮಾ ರೋಷಣೆಯಾಗಿದೆ. ಈ ಚಿತ್ರದಲ್ಲಿ ಗಣೇಶ್ ಜತೆಗೆ ನಟ ರಮೇಶ್ ಅರವಿಂದ್ ನಟಿಸುತ್ತಿರುವುದು ವಿಶೇಷ ಚಿತ್ರಕ್ಕೆ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಎಂದು ಹೆಸರಿಡಲಾಗಿದೆ. ‘ಸುಂದರಾಂಗ ಜಾಣ’ ಬಳಿಕ ಗಣೇಶ್-ರಮೇಶ್ ಜೋಡಿ ಮತ್ತೊಮ್ಮೆ ಒಂದಾಗಿದೆ. ‘ಯುವರ್ಸ್ ಸಿನ್ಸಿಯರ್ಲಿ ರಾಮ್’ಗೆ ಎ.ಆರ್.ವಿಖ್ಯಾತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.