ಸ್ಯಾಂಡಲ್ವುಡ್ನ ನಟಿ ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಅವರಿಗೆ ಇಂದು ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಆತ್ಮೀಯ ಗೌರಂಗ್ ನಿನ್ನಂತ ಸಹೋದರ ಪಡೆದ ನಾನು ಅದೃಷ್ಟವಂತೆ ಎಂದು ಬರೆದುಕೊಂಡಿರುವ ರಾಧಿಕಾ ಪಂಡಿತ್ ಅವರು ಹುಟ್ಟು ಹಬ್ಬದ ಶುಭಾಶಯಗಳು ಗೊಲ್ಲು ಲವ್ ಯೂ ಎಂದಿದ್ದಾರೆ. ಇನ್ನು ಫ್ಯಾನ್ಸ್ ಕೂಡ ಶುಭಾಶಯ ತಿಳಿಸಿದ್ದು, ಅವರ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅವರ ಸಹೋದರನಿಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಇವರ ಫೋಟೋಗಳನ್ನು ಫ್ಯಾನ್ಸ್ ತಮ್ಮ ಪೇಜ್ಗಳಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷವೂ ತಪ್ಪದೇ ತಮ್ಮನಿಗೆ ರಾಧಿಕಾ ಪಂಡಿತ್ ಅವರು ಜನ್ಮದಿನದ ಶುಭಾಶಯ ಕೋರುತ್ತಾರೆ . ಈ ಮೊದಲು ರಕ್ಷಾ ಬಂಧನದ ಸಂದರ್ಭದಲ್ಲೂ ರಾಧಿಕಾ ಅವರು ತಮ್ಮನ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದರು.