ಸ್ಯಾಂಡಲ್ವುಡ್ ನಟ ದಿವಂಗತ ಬುಲೆಟ್ ಪ್ರಕಾಶ್ರವರ ಮಗ ರಕ್ಷಕ್ ಬುಲೆಟ್ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಕಣ್ಣೀರಿಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಒಂದು ಘಟನೆಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ ಎಂದು ಹೇಳಿದ್ದಾರೆ.
ರಕ್ಷಕ್ ಬುಲೆಟ್ ವಿಡಿಯೋದಲ್ಲಿ ತನ್ನ ತಂದೆಯ ನೆನಪಾಯ್ತು ಎಂದು ಹೇಳಿದ್ದಾರೆ. ನಾನು ತುಂಬಾ ಸ್ಟ್ರಾಂಗ್ ಆದರೆ ತಂದೆಯ ನೆನಪಾದಾಗ ಕಣ್ಣಿನಲ್ಲಿ ನೀರು ಬರುತ್ತದೆ. 6.30 ಅಥವಾ 7 ಗಂಟೆಗೆ ಫೋಟೋ ಪೋಸ್ಟ್ ಮಾಡುತ್ತೇನೆ. ಆ ಬಟ್ಟೆ ಮೇಲೆ ನನ್ನ ತಂದೆಯ ಫೋಟೋ ಇರುತ್ತೆ. ಅದರ ಕ್ಯಾಪ್ಶನ್ ಬರೆಯುವಾಗಲು ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಯಾಕೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನೀವೆಲ್ಲಾ ನನ್ನ ಇಷ್ಟ ಪಟ್ಟಿರಬಹುದು, ಪ್ಲಸ್ ಅಥವಾ ಮೈನಸ್. ಎಲ್ಲವನ್ನು ನೋಡೋಕೆ ತಂದೆ ತಾಯಿ ಇರಬೇಕು ಲೈಫಲ್ಲಿ. ಇಲ್ಲ ಅಂತ ಹೇಳಿದಾಗ ನಾವು ಏನೇ ಮಾಡಿದ್ರು ಝಿರೋ ಆಗಿ ಬಿಡುತ್ತೇವೆ. ನೀವು ಏನೆಲ್ಲಾ ಸಕ್ಸಸ್ ಮಾಡಬೇಕು ಅಂದುಕೊಂಡಿದ್ದೀರಾ ನಿಮ್ಮ ತಾಯಿ ತಂದೆ ಇದ್ದಾಗ ಸಕ್ಸಸ್ ಮಾಡಿ ದಯವಿಟ್ಟು ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ‘ಮಿಸ್ ಯು ಅಪ್ಪಾ’ ಎಂದು ಬರೆದುಕೊಂಡಿದ್ದಾರೆ.
ರಕ್ಷಕ್ ಬುಲೆಟ್ ಖಾಸಗಿ ವಾಹಿನಿಯೊಂದು ನಡೆಸಿಕೊಡುತ್ತಿರುವ ಶೋವೊಂದರಲ್ಲಿ ಭಾಗಿಯಾಗುತ್ತಿದ್ದು, ಅದರಲ್ಲಿ ತಂದೆ ಬುಲೆಟ್ ಪ್ರಕಾಶ್ ಫೋಟೋ ಇರುವ ಕಪ್ಪು ಕೋಟ್ ಧರಿಸಿದ್ದಾರೆ. ಇದನ್ನೂ ಸಹ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.