ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಬೆನ್ನು ನೋವಿನ ಕಾರಣಕ್ಕೆ ಜೈಲಿನಿಂದ ಹೊರಬಂದಿದ್ದಾರೆ. ಜೈಲಿನಲ್ಲಿ ಇದ್ದ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯತೆ ಇದೆ ಕೋರ್ಟ್ಗೆ ಮನವರಿಕೆ ಮಾಡಿಕೊಡಲಾಯಿತು. ಹೀಗಾಗಿ, ಕರ್ನಾಟಕ ಹೈಕೋರ್ಟ್ ಅವರಿಗೆ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಈಗ ದರ್ಶನ್ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:US Election | ಡೋನಾಲ್ಡ್ ಟ್ರಂಪ್ ಗೆಲುವು: ಪ್ರಧಾನಿ ಮೋದಿ ಅಭಿನಂದನೆ
ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರ ಆರೋಗ್ಯದ ಹಿತದೃಷ್ಟಿಯಿಂದ ಸರ್ಜರಿ ಸೂಕ್ತ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ದರ್ಶನ್ಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರ ತಂಡ ಮುಂದಾಗಿದೆ. ದರ್ಶನ್ ಅವರನ್ನು ವೈದ್ಯರು ವಿವಿಧ ಸ್ಕ್ಯಾನ್ ಗೆ ಒಳಪಡಿಸಿದ್ದು, ಒಂದೆರಡು ದಿನಗಳಲ್ಲಿ ದರ್ಶನ್ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ದರ್ಶನ್ಗೆ ಸರ್ಜರಿ ನಡೆಸಲು ಪತ್ನಿ ವಿಜಯಲಕ್ಷ್ಮೀ ಸಮ್ಮತಿ ನೀಡಿದ್ದಾರೆ.
ಇದನ್ನು ಓದಿ:ಆಸ್ಟ್ರೇಲಿಯಾ ತಂಡದ ನಾಯಕನಾಗಿ ಜೋಶ್ ಇಂಗ್ಲಿಸ್ ಆಯ್ಕೆ!
ಬೆನ್ನುಹುರಿ ಶಸ್ತ್ರಚಿಕಿತ್ಸೆ ಎಂದರೆ ಅದು ತುಂಬಾನೇ ಸೂಕ್ಷ್ಮ ಶಸ್ತ್ರಚಿಕಿತ್ಸೆ ಆಗಿದೆ. ಸರ್ಜರಿ ಬಳಿಕ ವೈದ್ಯರು ದರ್ಶನ್ಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡುವ ಸಾಧ್ಯತೆ ಇದೆ. ವೈದ್ಯರು ಎಷ್ಟು ದಿನ ದರ್ಶನ್ಗೆ ವಿಶ್ರಾಂತಿ ಪಡೆಯಲು ಸೂಚನೆ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ದರ್ಶನ್ ಜೈಲಿನಿಂದ ಹೊರ ಬಂದು ವಾರ ಕಳೆದಿದೆ. ಅವರ ಬಳಿ ಇನ್ನು ಐದು ವಾರಗಳು ಮಾತ್ರ ಉಳಿದಿವೆ. ಇದಾದ ಬಳಿಕ ಅವರು ಮರಳಿ ಜೈಲು ಸೇರಬೇಕಿದೆ.