ನಟ ಶಿವರಾಜ್ಕುಮಾರ್ ಅವರಿಗೆ ಇಂದು ಅಮೆರಿಕದಲ್ಲಿ ಸರ್ಜರಿ ನಡೆಯುತ್ತಿದ್ದು, ಈ ಕುರಿತು ಧ್ರುವ ಸರ್ಜಾ ಮಾತನಾಡಿದ್ದಾರೆ. ಶಿವಣ್ಣ ನಮ್ಮ ಇಂಡಸ್ಟ್ರಿಗೆ ಗಾಡ್ ಫಾದರ್ ಅವರ ಆರೋಗ್ಯ ಸುಧಾರಿಸಲಿ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಧ್ರುವ ಸರ್ಜಾ ಮಾತನಾಡಿ, ಲಿವಿಂಗ್ ಲೆಜೆಂಡ್ ಶಿವಣ್ಣಗೆ ಆಪರೇಷನ್ ನಡೆಯುತ್ತಿದೆ. ಆ ಭಗವಂತ ನನಗೆಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೂ ಅವರಿಗೆ ಕೊಡಲಿ ಎಂದರು. ಅವರು ನಮ್ಮ ಇಂಡಸ್ಟ್ರಿಗೆ ಗಾಡ್ ಫಾದರ್ ಅವರ ಆರೋಗ್ಯ ಸುಧಾರಿಸಲಿ ಎಂದು ಮಾತನಾಡಿದ್ದಾರೆ.
ಈ ವೇಳೆ ಡೈರೆಕ್ಟರ್ ಪ್ರೇಮ್ ಮಾತನಾಡಿ, ಯುಎಸ್ನಲ್ಲಿ ಶಿವಣ್ಣನ ಆಪರೇಷನ್ ಇದೆ. ಅವರಿಗೆ ಒಳ್ಳೆಯದಾಗಲಿ. ಅವರು ಮತ್ತೆ ಎನರ್ಜಿಟಿಕ್ ಆಗಿ ಬರಬೇಕು ಎಂದಿದ್ದಾರೆ . ಇದೇ ವೇಳೆ ದರ್ಶನ್ ಜೊತೆಗಿನ ಸಿನಿಮಾ ಕುರಿತು ಮಾತನಾಟಿ ಅವರೊಂದಿಗೆ ಸಿನಿಮಾ ಮಾಡೇ ಮಾಡ್ತೀನಿ ಅದರಲ್ಲೇನು ಡೌಟ್ ಇಲ್ಲ ಎಂದು ಹೇಳಿದರು.