ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಶಸ್ತ್ರ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. ರಿಲ್ಯಾಕ್ಸ್ ಮೂಡ್ನಲ್ಲಿರುವ ಶಿವಣ್ಣ ದಂಪತಿ ಅಮೆರಿಕಾದಲ್ಲಿ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ.
ಬೀಚ್ನಲ್ಲಿ ಶಿವಣ್ಣ ದಂಪತಿ ಫೋಟೋ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಪ್ಲೋರೊಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಇನ್ನೊಂದು ಚೆಕಪ್ ಬಾಕಿ ಇದ್ದು, ಮುಂದಿನ ವಾರ ಚೆಕಪ್ ಮುಗಿಸಿ ಜನವರಿ 24ಕ್ಕೆ ಭಾರತಕ್ಕೆ ಬರಲಿದ್ದಾರೆ.
ಅಮೆರಿಕಾದ ಪ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ನಟ ಶಿವರಾಜ್ಕುಮಾರ್ ಅವರಿಗೆ ಸರ್ಜರಿ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ಶಿವಣ್ಣ ಅವರ ಫ್ಯಾಮಿಲಿ ಅವರ ಪ್ರೀತಿಯ ಪೆಟ್ ಡಾಗ್ ನಿಮೋವನ್ನು ಕಳೆದುಕೊಂಡಿದ್ದರು. ಕುಟುಂಬದ ಭಾಗವಾಗಿದ್ದ ನಿಮೋ ತೀರಿಕೊಂಡಿರುವ ವಿಚಾರವನ್ನು ಗೀತಾ ಶಿವರಾಜ್ಕುಮಾರ್ ಅವರು ತಿಳಿಸಿದ್ದರು.
ನಟ ಶಿವರಾಜ್ ಕುಮಾರ್ ಅವರು ಶಸ್ತ್ರ ಚಿಕಿತ್ಸೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಫ್ಯಾಮಿಲಿ ಜೊತೆ ತಿರುಪತಿಗೆ ಭೇಟಿ ಕೊಟ್ಟಿದ್ದರು. ಅಮೆರಿಕಾಗೆ ಚಿಕಿತ್ಸೆಗೆಂದು ಹೋಗುವ ಮುನ್ನ ತಿಮ್ಮಪ್ಪನ ಹರಕೆ ತೀರಿಸಿದ ಶಿವಣ್ಣ ದಂಪತಿ, ತಿರುಪತಿ ತಿಮ್ಮಪ್ಪನಿಗೆ ಮುಡಿ ನೀಡಿದ್ದರು. ಅವರ ತಿರುಪತಿಗೆ ಭೇಟಿ ಕೊಟ್ಟ ಫೋಟೋಗಳು ವೈರಲ್ ಆಗಿತ್ತು.