- ಕ್ರೈಮ್ ಥ್ರಿಲ್ಲರ್ ‘ಟೆನೆಂಟ್’ ಟ್ರೈಲರ್ಗೆ ಫ್ಯಾನ್ಸ್ ಫಿದಾ
- ನಿರೀಕ್ಷೆ ಹೆಚ್ಚಿಸಿದ ‘ಟೆನೆಂಟ್’ ಟ್ರೈಲರ್: ನೆವಂಬರ್ 22ಕ್ಕೆ ಸಿನಿಮಾ ರಿಲೀಸ್
- ಬಿಗ್ ಬಾಸ್ ಮನೆಯೊಳಗಿರುವ ಧರ್ಮಕೀರ್ತಿ, ಉಗ್ರಂ ಮಂಜು ಸಿನಿಮಾದ ಟ್ರೈಲರ್ ರಿಲೀಸ್
ಟೆನಂಟ್ ಈಗೀಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದ ಸಿನಿಮಾ ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಚಿತ್ರೀಕರಣ ಮುಗಿಸಿ ಸಿನಿ ಅಭಿಮಾನಿಗಳಗ ಹೃದಯಕ್ಕೆ ಲಗ್ಗೆ ಇಡುವ ಸಲುವಾಗಿ ಪ್ರಮೋಷನ್ ಅಂಗಳಕ್ಕೆ ಇಳಿದಿದೆ ಟೆನಂಟ್ ಟೀಂ. ಅಂದಹಾಗೆ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೆ ಇದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮಕೀರ್ತಿರಾಜ್ ಮತ್ತು ಉಗ್ರಂ ಮಂಜು ಸೇರಿದಂತೆ ನಟ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಶ್ರೀಧರ್ ಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಶ್ರೀಧರ್ ಅವರಿಗೆ ಇದು ಮೊದಲ ಸಿನಿಮಾ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡಿದ್ರೆ ಇದು ಚೊಚ್ಚಲ ಸಿನಿಮಾ ಅಂತ ಅನಿಸದ ಹಾಗೆ ಅಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ ನಿರ್ದೇಶಕರು.
ಮಾಸ್ಟರ್ ಚಾಯ್ಸ್ ಕ್ರಿಯೇಶನ್ನಡಿ ನಾಗರಾಜ್ ಟಿ ನಿರ್ಮಾಣ ಮಾಡಿರುವ ಟೆನಂಟ್ ಭಾರಿ ಕುತೂಹಲ ಮೂಡಿಸಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಟೆನೆಂಟ್ ಸಿನಿಮಾದ ಟ್ರೈಲರ್ ಆಕರ್ಷಕವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಒಂದೆ ಮನೆಯಲ್ಲಿ ನಡೆಯುವ ಕಥೆ ಇದಾಗಿದೆ.
‘ಕಣ್ ಕಣ್ಣ ಸಲಿಗೆ…’ ಎಂದು ಲವರ್ ಬಾಯ್ ಆಗಿ ಮಿಂಚಿದ್ದ ನಟ ಧರ್ಮಕೀರ್ತಿರಾಜ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನ ತಿಲಕ್ ರಾಜ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಅವರ ಪಾತ್ರಗಳು ವಿಭಿನ್ನವಾಗಿದ್ದು ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಚಿತ್ರದಲ್ಲಿ ಎಲ್ಲರ ಪಾತ್ರಗಳು ಸಹ ಗಮನ ಸೆಳೆಯುತ್ತಿದ್ದು ಬ್ಯಾಗ್ರೌಂಡ್ ಸ್ಕೋರ್ ಚಿತ್ರದ ಕುತೂಹಲ, ನಿರೀಕ್ಷೆ ಮತ್ತಷ್ಟು ಹೆಚ್ಚಿಸುತ್ತಿದೆ.
ಇದನ್ನು ಓದಿ: ಲೈಂಗಿಕ ಕಿರುಕುಳ ಆರೋಪದಿಂದ ನಟ ನಿವಿನ್ ಪೌಲಿ ಖುಲಾಸೆ !
ಪೊಲೀಸ್ ಪಾತ್ರದಲ್ಲಿ ಮಿಂಚಿರುವ ನಟ ತಿಲಕ್ ಮಾತನಾಡಿ, ನಿರ್ದೇಶಕ ಶ್ರೀಧರ್ ಕಥೆ ಹೇಳಿದಾಗ ತುಂಬಾ ಇಷ್ಟ ಆಯ್ತು. ಇದು ನಿಜಕ್ಕೂ ನೈಜ ಘಟನೆ ಆಧಾರಿತವಾಗಿರುವುದಾ ಅಂತ ಕೇಳಿದೆ. ನನ್ನ ಸಿನಿಮಾ ಜೀವನದಲ್ಲೇ ಇಂಥ ಪಾತ್ರ ಮಾಡಿಲ್ಲ ಇದು ಖಂಡಿತ ನನ್ನ ಜೀವನದ ಹೈಲೆಟ್ ಸಿನಿಮಾವಾಗಲಿದೆ’ ಎಂದರು. ಇನ್ನು ನಟ ರಾಕೇಶ್ ಮಯ್ಯಾ ಮಾತನಾಡಿ, ನಿರ್ದೇಶಕ ಶ್ರೀಧರ್ ಪಾತ್ರದ ಬಗ್ಗೆ ತುಂಬಾ ಕ್ಲಾರಿಟಿ ಇಟ್ಟುಕೊಂಡು ಮಾಡಿದ್ದಾರೆ. ಒಂದೇ ಮನೆಯಲ್ಲಿ ನಡೆಯುವ ಸಿನಿಮಾವಿದು.ತುಂಬಾ ಎಂಗೇಜಿಂಗ್ ಆಗಿ ಇಟ್ಕೊಂಡು ಮಾಡಿದ ಚಿತ್ರ. ಎಲ್ಲರೂ ಸಿನಿಮಾ ನೋಡಿ’ ಎಂದು ಹೇಳಿದರು.
ಇದನ್ನು ಓದಿ: ಆರ್ಸಿಬಿಯಿಂದ ಗ್ಲೆನ್ ಮ್ಯಾಕ್ಸ್ವೆಲ್ಗೆ ಕೊಕ್!
ನಟಿ ಸೋನು ಗೌಡ ಮಾತನಾಡಿ, ‘ಮೊದಲು ಈ ಸಿನಿಮಾದ ಕಥೆ ಕೇಳಿ ಮಾಡಬೇಕಾ ಬೇಡವಾ ಅಂತ ಯೋಚನೆ ಮಾಡಿದ್ದೆ. ಯಾಕೆಂದರೆ ಈ ರೀತಿಯ ಪಾತ್ರ ನಾನು ಯಾವತ್ತು ಮಾಡಿರಲಿಲ್ಲ. ಜನ ನನ್ನನ್ನು ಸ್ವೀಕರ ಮಾಡ್ತಾರ ಎನ್ನುವ ಭಯವಿತ್ತು. ಆದರೆ ಕಥೆ ಇಷ್ಟು ಆಗಿ ಒಪ್ಪಿಕೊಂಡೆ. 21 ದಿನಗಳು ಶೂಟಿಂಗ್ ಮಾಡಿದ್ದು, ಲಾಕ್ ಡೌನ್ ಸಮಯದಲ್ಲಿ ಶೂಟಿಂಗ್ ಮಾಡಿದ್ದು ಒಂದೇ ಮನೆಯಲ್ಲಿ ಚಿತ್ರೀಕರಣ ಮಾಡಿದ್ದು. ಹಾಗಾಗಿ ಜನರನ್ನು ಎಂಗೇಜಿಂಗ್ ಆಗಿ ಇಟ್ಟುಕೊಳ್ಳಬಹುದ ಎನ್ನುವ ಡೌಟ್ ಕೂಟ ಇತ್ತು. ಆದರೆ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದರು.
ಇದನ್ನು ಓದಿ: ಹಿಂದೂಗಳ ಮೇಲೆ ಬಾಂಗ್ಲಾ ಸೇನೆ ದಾಳಿ!
ನಿರ್ದೇಶಕ ಶ್ರೀಧರ್ ಮಾತನಾಡಿ, ಲಾಕ್ಡೌನ್ ಬೇಸಡ್ ಇಟ್ಟುಕೊಂಡು ಮಾಡಿರುವ ಕಥೆ. ಒಂದೇ ಮನೆಯಲ್ಲಿ ನಡೆಯುವ ಕಥೆ. 5 ಪ್ರಮುಖ ಪಾತ್ರಗಳಿವೆ. ಎಲ್ಲರೂ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಎಲ್ಲರೂ ಸಿನಿಮಾ ನೋಡಿ’ ಎಂದು ಕೇಳಿಕೊಂಡರು. ಅಂದಹಾಗೆ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ ಸಂಯೊಜನೆ ಮಾಡಿದ್ದಾರೆ. ಉಜ್ವಲ್ ಸಂಕಲನ, ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿರುವ ಟೆನೆಂಟ್ ನವೆಂಬರ್ 22ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.