ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಸ್ಯಾಂಡಲ್ವುಡ್ ಕ್ಯೂಟ್ ಜೋಡಿಗಳಲ್ಲಿಒಂದು ಅಂತಲೇ ಹೇಳಬಹುದು. ಈ ಜೋಡಿ ಏನು ಮಾಡಿದರು ಸುದ್ದಿಯಾಗುತ್ತೆ ಅಂತಹದ್ದರಲ್ಲಿ ಈ ಕ್ಯೂಟ್ ಕಪಲ್ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ಈ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸುತ್ತಿದೆ. ಇತ್ತೀಚೆಗೆ ರಾಕಿಂಗ್ ‘ ಸ್ಟಾರ್ ಯಶ್ಗೆ ಫುಲ್ ಡಿಮ್ಯಾಂಡ್ ಅಂತಲೇ ಹೇಳಬಹುದು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಮೇಲಂತೂ ರಾಕಿ ಭಾಯ್ ಅವರ ರೇಂಜ್ ಕೂಡ ಚೇಂಜ್ ಆಗಿದೆ ಅಂತಲೇ ಹೇಳಬಹುದು. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಜೋಡಿ ಎಲ್ಲಿಗೆ ಹೋದರೂ ಕೂಡ ಜೊತೆಯಲ್ಲಿಯೇ ಹೋಗುತ್ತಾರೆ. ಜೊತೆಯಲ್ಲಿ ಸಮಯ ಕಳೆಯುತ್ತಾರೆ. ತಮ್ಮ ಮಕ್ಕಳೊಂದಿಗೆ ಸಿಂಪಲ್ ಜೀವನವನ್ನು ನಡೆಸುತ್ತಾರೆ.
ಇದನ್ನು ಓದಿ: ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಯುವ ಆಲ್ರೌಂಡರ್ ಪೈಪೋಟಿ!
ಹೀಗೆ ಎಲ್ಲರಿಗೂ ಮಾದರಿಯಾಗಿದ್ದ ಈ ಜೋಡಿ ದಿಢೀರನೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರೇ ಇದ್ದಕ್ಕಿಂದಂತೆ ಇವರಿಗೇನಾಯ್ತಪ್ಪಾ ಅಂದುಕೊಂಡ್ರ. ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಕೊರ್ಟ್ ಮೆಟ್ಟಿಲೇರಿರುವುದೇನೊ ನಿಜ ಆದ್ರೆ ಈ ಜೋಡಿ ಕೋರ್ಟ್ನಲ್ಲಿ ಕಾಣಿಸಿಕೊಂಡಿರುವುದು ಒಂದು ಜಾಹಿರಾತಿನ ಕಾರಣಕ್ಕೆ. ಹೌದು ರಾಕಿಂಗ್ ಸ್ಟಾರ್ ಯಶ್ ವಕೀಲರಾಗಿ ಈ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು, ರಾಧಿಕಾ ಅವರು ಕಟಕಟೆಯಲ್ಲಿ ನಿಂತಿರುವುದು ಈ ಜಾಹಿರಾತಿನಲ್ಲಿ ಕಂಡುಬಂದಿದೆ.
ಇದನ್ನು ಓದಿ: ಡೋನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ!
ನಟ ಯಶ್ ಅವರು ಸಿನಿಮಾದಲ್ಲಿ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ಸಾಕಷ್ಟು ಸಂಭಾವನೆ ಪಡೆಯುತ್ತಾರೆ. ಹಲವು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಅಡುಗೆ ಎಣ್ಣೆಯ ಕಂಪನಿಯೊಂದಕ್ಕೆ ರಾಧಿಕಾ ಪಂಡಿತ್ ಮತ್ತು ಯಶ್ ಅವರು ಜೋಡಿಯಾಗಿ ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ. ಆ ಕಾರಣದಿಂದ ಅವರು ಒಟ್ಟಿಗೆ ಜಾಹೀರಾತಿನಲ್ಲಿ ನಟಿಸಿದ್ದಾರೆ. ಕೋರ್ಟ್ ಥೀಮ್ನಲ್ಲಿ ಈ ಹೊಸ ಜಾಹೀರಾತು ಮೂಡಿಬಂದಿದೆ. ಇದನ್ನು ನೋಡಿ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ: ಬಿಜೆಪಿ ಅವರಿಗೆ ಕಾನೂನಿನ ಮೇಲೆ ಗೌರವವಿಲ್ಲ: ಸಿಎಂ ಗರಂ
ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರಾಧಿಕಾ ಪಂಡಿತ್ ಅವರು ಮೋಸಕ್ಕೆ ಒಳಗಾದ ಗ್ರಾಹಕಿಯ ಪಾತ್ರ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಬಂದ ಲಾಯರ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಕಂಪನಿಯ ನಿಜವಾದ ಅಡುಗೆ ಎಣ್ಣೆ ಯಾವುದು ಎಂಬುದನ್ನು ಸಾಬೀತು ಮಾಡಲು ಯಶ್ ಬಿರುಸಿನಿಂದ ವಾದ ಮಾಡಿದ್ದಾರೆ. ಈ ರೀತಿಯ ದೃಶ್ಯ ಜಾಹೀರಾತಿನಲ್ಲಿ ಇದೆ.